ಉದಯವಾಹಿನಿ , ಅಡುಗೆಮನೆಯಲ್ಲಿ ಸಬ್ಬಸಿಗೆ ಸೊಪ್ಪಿನ ವಾಸನೆ ಹರಡಿದರೆ ಊಟಕ್ಕೂ ಒಂದು ವಿಶೇಷ ರುಚಿ ಬರುತ್ತದೆ. ಆದರೆ ಈ ಸೊಪ್ಪು ಬೇಗನೆ ಒಣಗಿಬಿಡುವುದು, ಕಪ್ಪಾಗುವುದು ಬಹುತೇಕ ಮನೆಗಳಲ್ಲೂ ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಿಂದ ತಂದ ಮರುದಿನವೇ ಸೊಪ್ಪು ಬಾಡಿ ಹೋಗುವುದು ನೋಡಿ ಬೇಸರವಾಗುತ್ತೆ. ಸ್ವಲ್ಪ ಜಾಗ್ರತೆ, ಸರಿಯಾದ ಸಂಗ್ರಹಣಾ ವಿಧಾನಗಳಿದ್ದರೆ ಸಬ್ಬಸಿಗೆ ಸೊಪ್ಪನ್ನು ಹಲವು ದಿನಗಳವರೆಗೆ ಹಸಿರಾಗಿಯೇ ಇಟ್ಟುಕೊಳ್ಳಬಹುದು.
ತೊಳೆದ ತಕ್ಷಣ ಫ್ರಿಜ್ ನಲ್ಲಿ ಇಡಬೇಡಿ: ಸೊಪ್ಪನ್ನು ತೊಳೆದ ಬಳಿಕ ನೀರು ಸಂಪೂರ್ಣ ಒಣಗಿದ ಮೇಲೆ ಮಾತ್ರ ಸಂಗ್ರಹಿಸಬೇಕು. ತೇವಾಂಶ ಇದ್ದರೆ ಬೇಗ ಕೊಳೆಯುತ್ತದೆ.
ಹತ್ತಿ ಬಟ್ಟೆಯಲ್ಲಿ ಹೊದಿಸಿ ಇಡಿ: ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಸೊಪ್ಪನ್ನು ಸಡಿಲವಾಗಿ ಹೊದಿಸಿ ಏರ್‌ಟೈಟ್ ಡಬ್ಬಿಯಲ್ಲಿ ಇಟ್ಟರೆ ತಾಜಾತನ ಉಳಿಯುತ್ತದೆ.
ಪೇಪರ್ ಟವಲ್ ವಿಧಾನ: ಪೇಪರ್ ಟವಲ್‌ನಲ್ಲಿ ಸೊಪ್ಪನ್ನು ಮಡಚಿ ಜಿಪ್ ಲಾಕ್ ಕವರ್ ಅಥವಾ ಡಬ್ಬಿಯಲ್ಲಿ ಇಟ್ಟರೆ ಹೆಚ್ಚುವರಿ ತೇವಾಂಶ ಹೀರಿಕೊಳ್ಳುತ್ತದೆ.
ಕಡ್ಡಿಯೊಡನೆ ನೀರಿನಲ್ಲಿ ಇಡುವುದು: ಹೂವಿನಂತೆ, ಸೊಪ್ಪಿನ ಕಡ್ಡಿಯನ್ನು ಸ್ವಲ್ಪ ನೀರಿನಲ್ಲಿ ಇಟ್ಟು ಮೇಲೆ ಪ್ಲಾಸ್ಟಿಕ್ ಕವರ್ ಹಾಕಿ ಫ್ರಿಜ್‌ನಲ್ಲಿ ಇಡಬಹುದು.
Freeze ಮಾಡುವ ಆಯ್ಕೆಯೂ ಇದೆ: ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ರ್ಏಟೈಟ್ ಡಬ್ಬಿಯಲ್ಲಿ Freeze ಮಾಡಿದರೆ ಹಲವು ದಿನ ಬಳಸಬಹುದು.
