ಉದಯವಾಹಿನಿ, ಬಳ್ಳಾರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ. ಸಿ ಎಸ್ ರಘು ಅವರ ಬಣದಿಂದ ನಗರದ ಕೌಲ್ ಬಜಾರ್ ನ‌ ಕೆಂಚಪ್ಪ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ನೋಟ್ ಬುಕ್ ಮತ್ತು ಪೆನ್ನುಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಸಮಿತಿಯ ಜಿಲ್ಲಾಧ್ಯಕ್ಷರಾದ ಸುರೇಶ್ ಶಾಲೆಯ ಬಡ ಮಕ್ಕಳಿಗೆ ನೋಟ್ ಬುಕ್ಸ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡುವುದರ ಜೊತೆಗೆ
ಅಂಬೇಡ್ಕರ್” ಅವರ ಹಾದಿಯಲ್ಲಿ ಹಾಗೂ ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ ಅವರ ಸೇವೆಗಳನ್ನು ನೆನೆಯುತ್ತಾ ಸಮಾಜಮುಖಿಯ ಕಾರ್ಯಕ್ರಮಗಳನ್ನು ಮಾಡುತ್ತಾ, ಶಾಲೆಯ ಬಡ ಮಕ್ಕಳಿಗೆ ಸಮಾಜದಲ್ಲಿ ವಿದ್ಯೆಯೊಂದಿದ್ದರೆ, ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಧೀಮಂತ ನಾಯಕರ ಚರಿತ್ರೆಯನ್ನು ತಿಳಿಸಿದರು.
ಸಾಮಾಜಿಕವಾಗಿ ಸೌಲಭ್ಯಗಳನ್ನು ಒದಗಿಸುತ್ತ ತಮ್ಮ ಸಂಘಟನೆಯನ್ನು ಬಲಪಡಿಸುತ್ತಾ, ಸರ್ಕಾರದ ಸೌಲಭ್ಯಗಳನ್ನು ಕುರಿತು ಪೂರ್ಣ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಸಿಬ್ಬಂದಿ ಹಾಗೂ ಸಂಘದ ಜಿಲ್ಲಾ ಖಜಂಚಿಯಾದ ನಾಗೇಶ್. ನಾಗರಾಜ್,ಅರ್ಜುನ್, ಮಾಜಿ ಬುಡ ಅಧ್ಯಕ್ಷರು ವಿನೋದ್ ಕುಮಾರ್, ಶಂಕರ, ಕುಮಾರ್, ಈನಾಯಿತ್, ಚೆನ್ನಪ್ಪ ಸಂಘದ ಸದಸ್ಯರು ಭಾಗಿಯಾಗಿದ್ದರು.

 

Leave a Reply

Your email address will not be published. Required fields are marked *

error: Content is protected !!