ಉದಯವಾಹಿನಿ, ದೇವನಹಳ್ಳಿ: ದುಬೈನಿಂದ ಗುರುವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಕಲಿ ಪಾಸ್‌ಪೋರ್ಟ್- ವೀಸಾ ಜಾಲದ ಸದಸ್ಯನನ್ನು ವಿಮಾನ ನಿಲ್ದಾಣ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ಸಾದಿಕುಲ್ಲಾ ಬೇಗ್‌ನನ್ನು ವಶಕ್ಕೆ ಪಡೆದ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಕೆನಾಡದ ನಕಲಿ ವೀಸಾ ಪ್ರಕರಣದಲ್ಲಿ ಆರೋಪಿ ಹೆಸರು ಕೇಳಿ ಬಂದಿತ್ತು. ಆತನ ವಿರುದ್ಧ ಲುಕ್ ಔಟ್ ನೋಟಿಸ್
ಹೊರಡಿಸಲಾಗಿತ್ತು.
