
ಉದಯವಾಹಿನಿ,ಕೆಂಭಾವಿ: ಬಜೇಟ್ ಅಂದ್ರೆ ಸಾಮಾನ್ಯವಾಗಿ ಬಡವರು,ಕೂಲಿ ಕಾರ್ಮಿಕರು, ರೈತರ ಪರವಾಗಿ ಇರಬೇಕಾದ ಬಜೇಟ್ ರೈತರ ನೀರಿಕ್ಷೆಯನ್ನು ಹುಸಿಗೊಳಿಸಿ, ಭವಿಷ್ಯದ ಬಾಜಪಾದ ಬಂಡವಾಳ ಶಾಹಿಗಳ ಪರ ಇರುವ ಬಜೆಟ್ ಇದಾಗಿದೆ,ಆದಾಯ ತೆರಿಗೆ, ಕೈಗಾರಿಕೋದ್ಯಮ,ಕೃಷಿಕರ ಹಾಗೂ ದೇಶದ ಯುವ ಜನರ ನೀರಿಕ್ಷೆ ಹುಸಿಗೊಳಿಸಿದ ಬಜೆಟ್ ನಿರ್ಮಮಲಾ ಸೀತಾರಾಮ ಅವರು ಮಂಡಿಸಿದ್ದಾರೆ,ಅಂಕಿ ಸಂಖ್ಯೆ ಲೆಕ್ಕಕ್ಕೆ ಇಲ್ಲದ ಚುನಾವಣೆ ಎಂಬ ಮೋಹದ ಮಾಯಕ್ಕೆ ಸೀಲುಕಿ ಮಂಡಿಸಿರುವ ಬಜೇಟ್ ಇದಾಗಿದ್ದು.ಉದ್ಯಮಿಗಳ ಜೇಬು ತಂಬಲು ಮತ್ತು ನಾವೇ ಮುಂದಿನ ಬಜೇಟ್ ಮಂಡಿಸುತ್ತೇವೆ ಎನ್ನುವ ನಿರೀಕ್ಷೆ ಯಲ್ಲಿ ಈ ಬಜೇಟ್ ಮಂಡಿಸಿದ್ದಾರೆ,ಇದನ್ನು ದೇಶದ ಪ್ರಜ್ಞಾವಂತ ನಾಗರಿಕರು ತಿರಸ್ಕರಿಸುತ್ತಾರೆ. _ ನಜೀರ್ ಆಲಗೂರ್ (ಕಾಂಗ್ರೆಸ್ ಯುವ ಮುಖಂಡರು)
02) ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಇದು ರೈತರ ಪಾಲಿಗೆ ಇದೊಂದು ನಿರಾಶಾದಾಯಕ ಬಜೆಟ್.ಅಧಿಕಾರಕ್ಕೆ ಬರುವ ಮುನ್ನ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಭರವಸೆ ನೀಡಿದ್ದರು.
ಸ್ವಾಮಿನಾಥನ್ ವರದಿ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.. _ಮಹಿಪಾಲರೆಡ್ಡಿ ಡಿಗ್ಗಾವಿ ಕೃಷಿಕ ಕೆಂಭಾವಿ.
