ಉದಯವಾಹಿನಿ, ಮಸ್ಕಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್, ನಿಂದಾಗಿ ಏಷಿಯನ್ ಪೇಟಿಂಗ್ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಚ್ಚಿನಮಠ ಕಾಂಪ್ಲೆಕ್ಸ್ ನಲ್ಲಿರುವ ಮಳಿಗೆಯಲ್ಲಿ ಏಷಿಯನ್ ಪೇಂಟಿನ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವಾಗಿ ಅಂಗಡಿಯಲ್ಲಿರುವ 40 ಲಕ್ಷದ ಬೆಲೆಬಾಳುವ ಪೇಂಟ್ ಮತ್ತು ಮಿಷನ್ ಸುಟ್ಟು ಭಸ್ಮವಾಗಿದೆ. ಪಕ್ಕದ ಮಳಿಗೆಯಲ್ಲಿನ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ ಬೆಲೆ ಬಾಳುವ ವಸ್ತು ಹಾನಿಯಾಗಿದ್ದು, ತಡ ರಾತ್ರಿ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಸ್ಥಳಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆಗಮಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ‌ ನೀಡಿದರು, ಅಂಗಡಿ‌ ಮಾಲೀಕ ಚನ್ನಬಸವ ಉದ್ಬಾಳ‌ ಅವರಿಗೆ  ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಉದ್ಬಾಳ ಗ್ರಾಮದ ವೆಂಕಣ್ಣ ಕಮತರ, ಶಂಕರರಾವ್ ಕುಲಕರ್ಣಿ, ಶರಣಬಸವ ಸೊಪ್ಪಿಮಠ, ವೀರೇಶಗೌಡ, ಅಜಯ ನಾಡಗೌಡ, ನಾಗಯ್ಯ ಸ್ವಾಮಿ , ಅಮರೇಶ, ಚಂದ್ರಶೇಖರ ನಾಯಕ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

error: Content is protected !!