
ಉದಯವಾಹಿನಿ,ಚಿಂಚೋಳಿ: ಶಾಲಾಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಟ್ಯೂಷನ್ ಕ್ಲಾಸ್ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಪ್ರಾರಂಭಿಸಿದ್ದು ಶಾಲಾಮಕ್ಕಳು ಇದರ ಸದುಪಯೋಗ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಗೋಪಾಲ ಜಿ ಹೇಳಿದರು.ತಾಲ್ಲೂಕಿನ ನಿಡಗುಂದಾ ವಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವು ಜ್ಯೋತಿ ಬೆಳಗಿಸುವುದರ ಮೇಲೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ಶಾಲಾಮಕ್ಕಳು ಯಾವುದೇ ಕೆಟ್ಟ ಚಟಗಳಿಂದ ದೂರವಿದ್ದು ಒಳ್ಳೆಯ ಗುಣಗಳು ಅಳವಡಿಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳು ಪಡೆದು ಉನ್ನತ ಮಟ್ಟದ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಲಿಂಗಣ್ಣ,ಮೇಲ್ವಿಚಾರಕರಾದ ಮಹಾದೇವಿ ಎಮ್,ಸೇವಾ ಪ್ರತಿನಿಧಿಯಾದ ಗಂಗಮ್ಮಾ,ಹಾಗೂ ಶಾಲಾಮಕ್ಕಳು,ಮುಖ್ಯಗುರುಗಳು,ಸಹ ಶಿಕ್ಷಕರು ಅನೇಕರಿದ್ದರು.
