ಉದಯವಾಹಿನಿ, ಇಂಡಿ :ತಾಲೂಕಿನ ಲಚ್ಯಾಣ ಗ್ರಾಮದ ರಾಮಚಂದ್ರಗೌಡ ಬಿರಾದಾರ (ದೊಡಗೊಂಡ) ಇವರ ಚಿರಂಜೀವಿ ಮಹಾಂತೇಶ ಬಿರಾದಾರ ಇವರು ಸುಮಾರು 22 ವರ್ಷಗಳ ಕಾಲ ಭಾರತಾಂಬೆಯ ಸುದೀರ್ಘ ಸೇವೆಯನ್ನು ಮಾಡಿ  ಸೇವಾ ನಿವೃತ್ತಿ ಯಾಗಿ ಮರಳಿ ಲಚ್ಯಾಣ ಗ್ರಾಮಕ್ಕೆ ಬಂದರು. ಭಾರತಿಯ ಸೈನ್ಯದಲ್ಲಿ 2002 ರಲ್ಲಿ ಕೋರ್ ಇ ಎಮ್ ಇ ಸೇವೆಯನ್ನು ಪ್ರಾರಂಭಿಸಿ ದೇಶದ ಗಡಿಬಾಗಗಳಾದ ಜಮ್ಮು ಕಾಶ್ಮೀರದ ಪೂಂಚ್, ಓಡಿಸಾ,ಮಥುರಾ, ಅಂಡಮಾನ್ ನಿಕೋಬಾರ್, ಆಸಾಂ, ಹೀಗೆ ನಾನಾ ಭಾಗಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
 ಸೇವಾ ನಿವೃತ್ತಿ ಯಾದ ಅವರನ್ನು ಅವರಿಗೆ ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ಗೆಳೆಯರ ಬಳಗ ಆತ್ಮೀಯವಾಗಿ ಬರಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣ ಗೆ ಮಾಡಿದರು ನಂತರ ಶ್ರೀ ಸಿದ್ದಲಿಂಗ ಮಹಾರಾಜರ ಮಠದ ಆವರಣದಲ್ಲಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಷ ಬ ಅಭಿನವ ಮುರುಘರಾಜೇಂದ್ರ ಸ್ವಾಮೀಜಿ ಹೀರೆಮಠ ಶಾರಶ್ಯಾಡ ಮತ್ತು ಡಾ. ಸ್ವರೂಪಾನಂದ ಸ್ವಾಮೀಜಿಗಳು ಓಂಕಾರ ಮಠ ಇಂಡಿ ಇವರು ವಹಿಸಿದ್ದರು ಪ್ರಾಸ್ತಾವಿಕವಾಗಿ ಡಿ ಎ ಮುಜಗೌಂಡ ಬಿಟ ಆಫೀಸರ್ ಹೊರ್ತಿ ಇವರು ಮಾತನಾಡಿ ರಾಜ್ಯದಲ್ಲಿಯೇ ಲಚ್ಯಾಣ ಗ್ರಾಮ  ಜಿಲ್ಲೆಯಲ್ಲಿ ಅತಿ ಹೆಚ್ಚು ಸೈನಿಕರನ್ನು ಭಾರತ ಮಾತೆಯ ಸೇವೆಗೆ ಕಳುಹಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು ಸತತವಾಗಿ 22 ವರ್ಷಗಳು ತನ್ನ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಆತ್ಮೀಯ ಗೆಳೆಯರನ್ನು ಬಿಟ್ಟು ಅತಿ ಉಷ್ಣ ಮತ್ತು ಅತಿ ಶೀತ ಪ್ರದೇಶದಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಸ್ಮರಿಸಿಕೊಂಡರು ಮಹಾಂತೇಶ ಬಿರಾದಾರ ಅವರ ಕರ್ತವ್ಯವನ್ನು ಶ್ಲಾಘನೀಯ ವೆಂದು ಬಣ ್ಣಸಿದರು . ಜ್ಯೋತಿ ಬೆಳಗಿಸಿ ಶಾಸಕರ ಚಿರಂಜೀವಿ ವಿಠ್ಠಲಗೌಡ ಪಾಟೀಲ್ ಉದ್ಘಾಟನೆ ಮಾಡಿ ಚಾಲನೆ ನೀಡಿದರು ಶ್ರೀ ಸಿದ್ದಲಿಂಗ ಮಹಾರಾಜರ ಮತ್ತು ಸಂಗನಬಸವ ಶಿವಯೋಗಿಗಳ ಭಾವ ಚಿತ್ರಕ್ಕೆ ಪೂಜೆಯನ್ನು ಪುರಸಭೆ ಸದಸ್ಯರು ಮತ್ತು ಬಿಜೆಪಿ ಮುಖಂಡರಾದ ಅನಿಲಗೌಡ ಬಿರಾದಾರ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!