ಉದಯವಾಹಿನಿ, ಇಂಡಿ: ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಜವೆ ಗೋದಿ  ಬೆಳೆಯ ತಳಿ ಡಿ.ಡಿ.ಕೆ.-1029 ಕುರಿತು ಕ್ಷೇತ್ರೊತ್ಸವ ತಾಲೂಕಿನ ಹಿರೇಬೇವನೂರ ಗ್ರಾಮದ ನಿವಾಸಿ ಸಂತೋಷ ಬಿರಾದರ ಅವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಂಡಿ ಕೆ.ವಿ.ಕೆ. ವತಿಯಿಂದ 2023-24ನೇ ಸಾಲಿನ ಮುಂಚೂಣ  ಪ್ರಾತ್ಯಕ್ಷಿಕೆಯನ್ನು ವಿವಿಧ ಗ್ರಾಮದ  10 ಜನ ರೈತರಿಗೆ ಜವೆ ಗೋದಿ  ಬೆಳೆಯ ತಳಿ ಡಿ.ಡಿ.ಕೆ.-1029 ಬೀಜಗಳನ್ನು ವಿತರಣೆ ಮಾಡಿ ಅವುಗಳ ಬೇಸಾಯ ಕ್ರಮಗಳ ಕುರಿತು ಮುಂಚೂಣ  ಪ್ರಾತ್ಯಕ್ಷಿಕೆಯನ್ನು ನೀಡಲಾಗಿತ್ತು.
ಕಾರ್ಯಕ್ರಮದ ಆಯೋಜಕರಾದ ಡಾ. ಪ್ರಕಾಶ ಜಿ. ವಿಜ್ಞಾನಿ  ಮಾತನಾಡಿ  ಜವೆ ಗೋದಿ ಡಿ.ಡಿ.ಕೆ.-1029 ತಳಿ  ಹಿಂಗಾರಿಗೆ ಸೂಕ್ತವಾದ ಡಿ.ಡಿ.ಕೆ.-1029 ತಳಿಯು ಡೈಕೊಕಮ ಜಾತಿಗೆ ಸೇರಿದ ತಳಿಯಾಗಿದೆ ಇದನ್ನು ಸ್ಥಳೀಯವಾಗಿ ಕಪಲಿ ಅಥವಾ ಸದಕ ಎಂದು ಕರೆಯುತ್ತಾರೆ. ಈ ತಳಿಯು ೧೦೫-೧೧೦ ದಿನಗಳಲ್ಲಿ ಕಟಾವಿಗೆ ಬರುತ್ತದೆ ಹಾಗೂ ಚಪಾತಿ ಹಾಗೂ ರವಾ ಮಾಡಲು ಸೂಕ್ತವಾಗಿದೆ ಹಾಗೂ ಗೋದಿ ಸಸ್ಯವು ಸುಮಾರು ೧೫೦-೧೮೦ ಸೆಂ.ಮಿ. ಎತ್ತರಕ್ಕೆ ಬೆಳೆದು ತುಕ್ಕು ರೋಗವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ ಮತ್ತು ನಾರಿನಂಶ ಹೆಚ್ಚಿಗೆ ಇರುವದರಿಂದ ಸಕ್ಕರೆ ಕಾಯಿಲೆ ರೋಗಿಗಳ ಸೇವನಗೆ ಉತ್ತಮ ಆಹಾರ ಧಾನ್ಯವಾಗಿದೆ ಎಂದು ತಿಳಿಸಿದರು. ಸಂತೋಷ ಬಿರಾದರ  ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದವರು  ತಿಳಿಸಿದ ಕ್ರಮಗಳನ್ನು ಅನುಸರಿಸಿ ಬೆಳೆಯನ್ನು ಬೆಳೆದಿದ್ದು ಇದು ಕಪ್ಪು ಮಣ ್ಣಗೆ ಸೂಕ್ತವಾದ ತಳಿಯಾಗಿದ್ದು ಇದನ್ನು ಅಕ್ಟೋಬರ ಎರಡನೆ ಪಾಕ್ಷಿಕದಲ್ಲಿ ಬಿತ್ತನೆ ಮಾಡಿದ್ದು ಈ ಸಾಲಿನಲ್ಲಿ ಉತ್ತಮ ಜವೆ ಗೋದಿ ಇಳುವರಿ ನಿರೀಕ್ಷೆ ಇದ್ದು (ಅಂದಾಜು 14-18 ಕ್ವಿ/ಎಕರೆ) ಹಾಗೂ ತುಕ್ಕು ರೋಗದ ಬಾದೆಯು ಸಹ ಕಂಡುಬAದಿರುವದಿಲ್ಲ ಎಂದು ತಿಳಿಸಿದರು.
 ಪ್ರಗತಿಪರ ರೈತರಾದ  ಸುರೇಶ,  ವಿಠ್ಠಲ ಮತ್ತು  ಸಿದ್ದರಾಮ ಹಾಜರಿದ್ದರು. ಹೀರೆಬೆವನೂರ ಹಾಗೂ ಸುತ್ತಮುತ್ತಲಿನ ಗ್ರಾಮದ 30 ಕ್ಕಿಂತ ಹೆಚ್ಚಿನ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!