ಉದಯವಾಹಿನಿ, ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ ಈಶ ಮಹಾಶಿವರಾತ್ರಿ ಆಚರಣೆಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಮಾರ್ಚ್ ೮ ರಿಂದ ೧೦ ರ ನಡುವೆ ೪ ಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಯಿತು. ಆಚರಣೆಯ ದಿನದಂದು, ಅಂದರೆ ಮಾರ್ಚ್ ೮ರ ಬೆಳಿಗ್ಗೆ ೮ ಗಂಟೆಯಿಂದ ಮಾರ್ಚ್ ೯ರ ಬೆಳಿಗ್ಗೆ ೮ ಗಂಟೆಯ ನಡುವೆ ಸುಮಾರು ಎರಡೂವರೆ ಲಕ್ಷ ಜನರು ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಮಹಾಶಿವರಾತ್ರಿಯ ಮರುದಿನವಾದ ಒಂದು ಲಕ್ಷಕ್ಕೂ ಹೆಚ್ಚು ಜನರು ನೆರೆದಿದ್ದರು, ಮತ್ತು ಉಳಿದ ಜನಸಮೂಹ ಮಾರ್ಚ್ ೧೦ ರಂದು ಆಗಮಿಸಿದರು.
ಸದ್ಗುರು ಸನ್ನಿಧಿಗೆ ಈ ಜನಸಾಗರ ಹರಿದು ಬಂದಿದ್ದರೂ, ಆಚರಣೆಯ ಏರ್ಪಾಡುಗಳು ಸುಸೂತ್ರವಾಗಿ ನಡೆದವು. ಮತ್ತು ಸ್ಥಳೀಯ ಆಡಳಿತ ಮಂಡಳಿಗಳ ಬೆಂಬಲವೂ ದೊರೆಯಿತು. ಸುಮಾರು ೨೦೦ ಪೊಲೀಸರ ಪಡೆ, ೨೦೦ ಹೋಮ್ ಗಾರ್ಡ್ಸ್ ಪಡೆ, ೧೭೦ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಕರ್ನಾಟಕ ರಾಜ್ಯ ಹೆಚ್ಚುವರಿ ಪೊಲೀಸ್ ಪಡೆಯ ಸಿಬ್ಬಂದಿ, ಮತ್ತು ಅನೇಕ ಈಶ ಸ್ವಯಂ ಸೇವಕರ ಶ್ರಮದಿಂದ ಕಾರ್‍ಯಕ್ರಮ ಸ್ಪಷ್ಟವಾಯಿತು.
ಕೆ.ಎಸ್.ಆರ್.ಟಿ.ಸಿ. ಯವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಲಕ್ಸುರಿ ಬಸ್‌ಗಳನ್ನು ಒಳಗೊಂಡಂತೆ ಅನೇಕ ಬಸ್‌ಗಳ ವ್ಯವಸ್ಥೆ ಮಾಡಿದ್ದರು. ೪೦೦೦ ಕಾರುಗಳು ಮತ್ತು ೫೦೦೦ ದ್ವಿಚಕ್ರ ವಾಹನಗಳಿಗಲ್ಲದೆ, ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ನೂರಾರು ಕೆ.ಎಸ್.ಆರ್.ಟಿ.ಸಿ.ಮತ್ತುಖಾಸಗಿ ಬಸ್‌ಗಳಿಗೆ ಕೂಡ ಪಾರ್ಕಿಂಗ್‌ವ್ಯವಸ್ಥೆ ಮಾಡಲಾಗಿತ್ತು.
