ಉದಯವಾಹಿನಿ ,ಕೊಟ್ಟೂರು : ಪಟ್ಟಣದಲ್ಲಿ ಉದ್ಬವಾಗಿರುವ ನೀರಿನ ಬವಣೆ ಕಡಿಮೆ ಮಾಡಲು ತಹಶಿಲ್ದಾರ ಮತ್ತು ಪಪಂ ಮುಖ್ಯಾಧಿಕಾರಿ ಜಂಟಿಯಾಗಿ ಕಳೆದ ಮೂರು-ನಾಲ್ಕು ದಿನಗಳಿಂದ ಸಿಬ್ಬಂದಿಯೊಂದಿಗೆ ಬಿಸಿಲು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ.
ಪಟ್ಟಣಕ್ಕೆ ಸರಬರಾಜು ಆಗುತ್ತಿದ್ದ ತುಂಗಭದ್ರಾ ನದಿಯ ನೀರು,ಮಳೆಯ ಅಭಾವದಿಂದ ನೀರಿನ ಕೊರತೆ ಉಂಟಾಗಿ ಪಟ್ಟಣದ ಜನರಿಗೆ ಪ್ರಸ್ತುತ ವರ್ಷ ಸಕಾಲದಲ್ಲಿ ನೀರು ಪೂರೈಸುವುದು ದುಸಾಹಸದ ಸ್ಥಿತಿ ಪಪಂ ಆಡಳಿತಕ್ಕೆ ಎದುರಾಗಿದೆ.
ನದಿಯಲ್ಲಿ ನೀರಿನ ಕೊರತೆಯ ಕಾರಣ ಪಟ್ಟಣದ ಕೆಲ ವಾರ್ಡ್ ಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಆಗುತ್ತಿತ್ತು ಆದರೆ ಬಿಸಿಲಿನ ಪ್ರಕರತೆ ದಿನ ದಿನಕ್ಕೆ ಏರುತ್ತಿರುವುದರಿಂದ ನದಿಯಲ್ಲಿ ನೀರಿಲ್ಲದಂತಾಗಿ 10-12 ದಿನಕ್ಕೆ ಒಮ್ಮೆ ಪಟ್ಟಣದ ಜನರಿಗೆ ನೀರು ಸರಬರಾಜು ಆಗುತ್ತಿದೆ.
ಈ ಹಿನ್ನೆಲೆ ತಹಶಿಲ್ದಾರ ಅಮರೇಶ್ ಜಿ.ಕೆ ಮತ್ತು ಪಪಂ ಮುಖ್ಯಾಧಿಕಾರಿ ತುಕಾರಾಮ ಯಮನಪ್ಪ ಮಾದರ ಈರ್ವರೂ ಹೆಚ್ಚಿನ ಕಾಳಜಿ ವಹಿಸಿ ಮಳೆ ಬೀಳುವವರಿಗೂ, ನೀರಿನ ಸಮಸ್ಯೆ ಪಟ್ಟಣದಲ್ಲಿ ಹೆಚ್ಚಾಗಿ ಉಲ್ಬಣಗೊಳ್ಳದಂತೆ ಬೋರವೆಲ್ ಮೂಲಕ, ರಾಜೀವ್ ನಗರ ಮತ್ತು ಕೆ.ಅಯ್ಯನಹಳ್ಳಿ ಪಂಪ್ ಹೌಸ್ ಗೆ ನೀರು ಶೇಖರಿಸಿ ಅಲ್ಲಿಂದ ಏರ್ ಟ್ಯಾಂಕ್ ಮೂಲಕ ಪಟ್ಟಣದ ಜನರಿಗೆ ವಾರಕ್ಕೆ ಒಮ್ಮೆ ನೀರು ಪೂರೈಸಲು ಸಿದ್ದತೆ ಕೈಗೊಂಡಿದ್ದಾರೆ.
ಹೆಚ್ಚು ನೀರು ಪೂರೈಕೆಗಾಗಿ ಪಟ್ಟಣ ಪಂಚಾಯತಿ ಬೋರವೆಲ್ ಜೊತೆಗೆ, ಪ್ರಸ್ತುತ 3 ಖಾಸಗಿ ಬೋರವೆಲ್ ಗಳನ್ನು ಪಡೆದಿದ್ದು ಇನ್ನೂ 2 ಬೋರವೆಲ್ ಪಡೆಯಲು ಮುಂದಾಗಿದೆ ಮತ್ತು
ಬೋರವೆಲ್ ಗೆ ಬೇಕಾದ ವಿದ್ಯುತ್ ಸೌಲಭ್ಯ ಮತ್ತು ಪೈಪ್ ಲೈನ್ ವ್ಯವಸ್ಥೆ, ಸ್ಥಳದಲ್ಲೇ ನೆರವೇರುತ್ತಿದೆ.
ಈ ಕಾರ್ಯದಲ್ಲಿ ಪಪಂ ಎಂಜಿನಿಯರ್ ಸಲೊಮಿ ನಿಹಾರಿಕ,ಜೆಸ್ಕಾಂ ಜೆಇ ಚೇತನ ಕುಮಾರ್,ಪಪಂ ಕಂದಾಯ ನಿರೀಕ್ಷಕರು ಕೊಟ್ರೇಶ್,ಪಪಂ ಸಿಬ್ಬಂದಿ ಪರುಸಪ್ಪ,ಅಗಡಿ ಮಂಜುನಾಥ, ಕೆಇಬಿ ಗುತ್ತಿಗೆದಾರ ಬಸವರಾಜ್ ಹಾಗೂ ಪಪಂ ವಾಟರ್ ಸಪ್ಲೈ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ತಹಶಿಲ್ದಾರ ಮತ್ತು ಪಪಂ ಮುಖ್ಯಾಧಿಕಾರಿ ಈರ್ವರೂ ಪಟ್ಟಣದ ಜನರಿಗೆ ನೀರು ಪೂರೈಸಲು ವಹಿಸಿರುವ ಶ್ರಮ ಶ್ಲಾಘನೀಯ.ಇದಕ್ಕೆ ಪಟ್ಟಣದ ಜನ್ರು ಅನವಶ್ಯಕ ನೀರನ್ನು ವ್ಯರ್ಥ ಮಾಡದೆ,ಎದುರಾಗುವ ನೀರಿನ ಸಮಸ್ಯೆ ದೂರಮಾಡಬೇಕು ಹಾಗೆ ಅಧಿಕಾರಿಗಳಿಗೆ ಜನ್ರು ಸದಾ ಸಹಕರಿಸಬೇಕು. ಬಂಜಾರ ನಾಗರಾಜ್, ಹಸಿರು ಹೊನಲು ತಂಡದ ಸದಸ್ಯರು. ಕೊಟ್ಟೂರು.ನೀರಿನ ಸಮಸ್ಯೆ ನೀಗಿಸಲು ಶ್ರಮಿಸುತ್ತಿರುವ ತಾಲೂಕು ಆಡಳಿತ
