ಉದಯವಾಹಿನಿ ,ಕುಕನೂರು: ತಾಲೂಕಿನ ಮಂಗಳೂರು ಗ್ರಾಮದ ಪುರಾಣ ಇತಿಹಾಸದ ಪವಿತ್ರ ಶಿವಾಲಯ ಶ್ರೀ ಮಂಗಳೇಶ್ವರ ದೇವರ ಹಾಗೂ ಪಾರ್ವತಿ ದೇವಿಯ ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ ವರ್ಷದ ಪಾಲ್ಗುಣ ಮಾಸದ ನವಮಿ ತಿಥಿಯಂದು ಜರುಗುತ್ತಿರುವ ಮಹಾರಥೋತ್ಸವ ಇಂದು ಅಪಾರ ಸಂಖ್ಯೆಯ ಭಕ್ತರ ಸಮೂಹದೊಂದಿಗೆ ಭಕ್ತಿ ಭಾವದಿಂದ ಶಾಂತವಾಗಿ ನೆರವೇರಿತು.
ಇಂದಿನ ಮಹಾರಥೋತ್ಸವದ ಶುಭ ಗಳಿಗೆಯಲ್ಲಿ ದೇಗುಲದ ದೇವರ ವಿಗ್ರಹಗಳಿಗೆ ಸಹಸ್ರ ಬಿಲ್ವಾರ್ಚನೆ ಮಹಾರುದ್ರಾಭಿಷೇಕ ಪುಷ್ಪಾಲಂಕೃತ ಪೂಜೆಗಳು ನೆರವೇರಿದ ಬಳಿಕ ಶ್ರೀ ಮಂಗಳೇಶ್ವರ ಸೇವಾ ಸಮಿತಿಯವರು ಏರ್ಪಡಿಸಿದ್ದ ಮಹಾಪ್ರಸಾದ ಮುಂಜಾನೆ ಮತ್ತು ತೇರಿನ ಸಂಭ್ರಮ ಆದ ಬಳಿಕ ಅಪಾರ ಸಂಖ್ಯೆಯ ಭಕ್ತರು ಈ ದೇಗುಲದ ಮಹಾಪ್ರಸಾದವನ್ನು ಸ್ವೀಕರಿಸಿ ಮಂಗಳೂರು ದೈವದವರ ಸೇವೆಯನ್ನು ಕೊಂಡಾಡಿದರು. ಮಹಾರಥೋತ್ಸವ ಸಾಂಗೋಪ ಸಾಂಗವಾಗಿ ನೆರವೇರಿದ ಬಳಿಕ ನಂದಿ ಧ್ವಜಗಳಿಂದ ಅಲಂಕೃತ ಪಲ್ಲಕ್ಕಿ ಮೂಲಕ ದೇವರ ಮೂರ್ತಿಗಳನ್ನು ದೇವಸ್ಥಾನಗಳಿಗೆ ಕೊಂಡೊಯಲಾಯಿತು.
