ಉದಯವಾಹಿನಿ, ವಿಜಯಪುರ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಕಳವಾಡಿ ಬಳಿ ಈಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದಾರೆ.
ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಲಕ್ಷ್ಮಣ ಭೀಮಪ್ಪ ತಳವಾರ, ಶಶಿಕುಮಾರ ರಂಗಪ್ಪ ಮಣಗೂರ ಹಾಗೂ ಬಸವರಾಜ ಪರಪ್ಪ ಹಡಪದ ಬಂಧಿತ ಆರೋಪಿಗಳಾಗಿದ್ದು, ಮಾ. 18ರಂದು ಆಕಳವಾಡಿ- ಮಾರಡಗಿ ತಾಂಡಾ ರಸ್ತೆ ಕೆನಾಲ್ದಲ್ಲಿ ಪಾರ್ವತೆವ್ವ ಭೀಮಪ್ಪ ತಳವಾರ ಹಾಗೂ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ ಅವರನ್ನು ಕೊಲೆ ಆರೋಪಿತರು ಪರಾರಿಯಾಗಿದ್ದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡ ರಚಿಸಿದ್ದರು. ಈ ತನಿಖಾ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ವುವಲ್ಲಿ ಯಶಸ್ವಿಯಾಗಿದೆ.
ತಾಯಿ ಪಾರ್ವತೆವ್ವ ತಳವಾರ ಸೋಮನಿಂಗಪ್ಪ ಕುಂಬಾರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದರಿಂದ ಸಿಟ್ಟಾಗಿದ್ದ ಆಕೆಯ ಪುತ್ರ ಲಕ್ಷ್ಮಣ ತಳವಾರ ತನ್ನ ಸ್ನೇಹಿತರ ಜೊತೆಗೂಡಿ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪೆÇಲೀಸರು ಈ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ನಡೆದ ಮತ್ತೊಂದು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸಾಗರ ಹೇಮಂತ ಲಮಾಣಿ ಹಾಲಿ ವಸ್ತಿ ವಿಜಯಪುರದ ಸಾಯಿ ಪಾರ್ಕ್ ನಿವಾಸಿ ಹಾಗೂ ಇಂಚಗೇರಿ ಗ್ರಾಮದ ಲಕ್ಷ್ಮಿಕಾಂತ ಕುಂಬಾರ ಹಾಲಿ ವಸ್ತಿ ವಿಜಯಪುರದ ಜಯ ಕರ್ನಾಟಕ ಕಾಲನಿ ನಿವಾಸಿ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
