ಉದಯವಾಹಿನಿ, ಕೆಂಭಾವಿ: ಜಗದ್ಗುರು ರೇಣುಕಚಾರ್ಯರು ಜಗತ್ತಿಗೆ ಸಿದ್ದಾಂತ ಶಿಖಾಮಣಿ ಎನ್ನುವ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ ಸಾಮರಸ್ಯ .ಸಹಬಾಳ್ವೆ.ಸೌಹಾರ್ದತೆ ಬದುಕಿ ಬಾಳುವುದನ್ನು ಅವರು ಬೋಧಿಸಿದ್ದಾರೆ ಅವರು ಹಾಕಿಕೊಟ್ಟ ಆದರ್ಶದಲ್ಲಿ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ ಎಂದು ರಾಜಶೇಖರಯ್ಯ ಸ್ವಾಮಿ ಹಿರೇಮಠ ಹೇಳಿದರು.ಪಟ್ಟಣದ ಹೀರೆಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯನಾಗಿ ಜನಿಸಿದ ಪ್ರತಿಯೊಬ್ಬರು ಸಂಸ್ಕಾರಯುತ ಜೀವನವನ್ನು ನಡೆಸಬೇಕು ಸಂಸ್ಕಾರದಿಂದ ಮಾತ್ರ ಶಿವನ ಅನುಗ್ರಹ ಪಡೆಯಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಚನ್ನಯ್ಯ ಸ್ವಾಮಿ ಚಿಕ್ಕಮಠ, ಬಸವರಾಜಯ್ಯಸ್ವಾಮಿ ಹೊಸಮನಿ,ರಾಚಯ್ಯಸ್ವಾಮಿ ಸದಬ, ಬಸಯ್ಯಸ್ವಾಮಿ ಪತ್ತೇಪುರ,ಸೂಗಯ್ಯ ಸ್ವಾಮಿ ಯಲಗೋಡ,ನಿಂಗಯ್ಯಸ್ವಾಮಿ ಯುಕೆಪಿ,ಆದಯ್ಯಸ್ವಾಮಿ ಹೀರೆಮಠ,ನಿಂಗಯ್ಯ ಆಲಯ್ಯಗೋಳ,ಸೋಮಶೇಖರಸ್ವಾಮಿ ಬಜಾರ,ಶ್ರೀಕಾಂತ ಸ್ವಾಮಿ ಹಿರೇಮಠ,ಪ್ರಶಾಂತ ಗಣಾಚಾರಿ,ಬಸವಲಿಂಗಯ್ಯ ಹಿರೇಮಠ,
ವಿರೇಶ ಗಣಾಚಾರಿ,ಸೂಗುರಯ್ಯ ಇಂಡಿ,ಚನ್ನಬಸಯ್ಯ ಹಿರೇಮಠ,ಮಂಜುನಾಥ. ಚೇತನ್ ಹಿರೇಮಠ,ರಾಚಯ್ಯ
ಮಾಂತಯ್ಯ ಹೀರೆಮಠ ಸೇರಿದಂತೆ ಅನೇಕರಿದ್ದರು,ಕಾರ್ಯಕ್ರವನ್ನು ರೇವಣಸಿದ್ದಯ್ಯ ಮಠ ನಿರೂಪಿಸಿದರು,ಪ್ರಶಾಂತ ಹೀರೆಮಠ, ಸ್ವಾಗತಿಸಿದರು, ದೊಡ್ಡಬಸಯ್ಯ ಪತ್ತೆಪೂರ ವಂದಿಸಿದರು.
