ಉದಯವಾಹಿನಿ, ಚನ್ನಪಟ್ಟಣ : ಮಂಗಳವಾರಪೇಟೆಯ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಯಾರಿಸಿದ ವಿವಿಧ ರೀತಿಯ ರಾಕೆಟ್ ಉಡಾಯನ ವಾಹನಗಳ ಮಾದರಿಗಳು ಹಾಗೂ ವಿವಿಧ ರೀತಿಯ ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು. ಚನ್ನಪಟ್ಟಣ ತಾಲ್ಲೂಕು ಶಿಕ್ಷಣ ಸಂಯೋಜಕರಾದ ರಾಜಲಕ್ಷ್ಮಿಯವರು ಬಾಹ್ಯಕಾಶದ ಬಗ್ಗೆ ಹಾಗೂ ಸೌರವ್ಯೂಹ, ಗ್ರಹಗಳು ಮತ್ತು ಉಪಗ್ರಹಗಳ ಬಗ್ಗೆ ವಿವರವಾಗಿ ತಿಳಿಸಿದರು.
ಚನ್ನಪಟ್ಟಣ ತಾಲ್ಲೂಕು ಅಕ್ಷರ ದಾಸೋಹ ಸಂಯೋಜಕರಾದ ಸಿದ್ಧರಾಜು, ಮುಖ್ಯ ಶಿಕ್ಷಕರಾದ ಮಂಜಪ್ಪ ಎಂ, ಚನ್ನಪಟ್ಟಣ ತಾಲ್ಲೂಕ್ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ರಂಗನಾಥ ಜಿ.ಕೆ, ಹಾಗೂ ವಿಜ್ಞಾನ ಶಿಕ್ಷಕಿಯಾದ ಎಸ್ ಲಕ್ಷ್ಮೀ ,ಶಿಕ್ಷಕರಾದ ಸುನೀತಾ ಬಿ.ಈ, ಈರಾನಾಯಕ್, ಭವ್ಯಶ್ರೀ, ಹೆಚ್.ಎಸ್, ಸೌಮ್ಯನಾಯ್ಕ, ಶ್ರೀನಿವಾಸ ಜಿ, ನಜ್ಮಾರವರು, ಉಪಸ್ಥಿತರಿದ್ದರು.
