ಉದಯವಾಹಿನಿ, ಕೋಲಾರ : ಮೂಕ ಪ್ರಾಣಿಯ ಮೇಲೆ ಕಿಡಿಗೇಡುಗಳು ಅಸಿಡ್ ಹಾಗೂ ಕಾದ ಎಣ್ಣೆಯನ್ನು ಸುರಿಯುವ ಮೂಲಕ ವಿಕೃತಿ ಮೆರೆದಿರುವ ಘಟನೆಯನ್ನು ಭಜರಂಗದಳ ತೀವ್ರವಾಗಿ ಖಂಡಿಸಿದೆ. ನಗರದಲ್ಲಿ ಆಗಾಗ್ಗೆ ಮೂಕ ಪ್ರಾಣಿಯದ ಹಸುಗಳ ಮೇಲೆ ನಡೆಯುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುವುದು ಕಳವಳಕಾರಿಯಾಗಿದೆ.
ನಗರದ ರಹಮತ್ ನಗರದಲ್ಲಿ ಕೆಲವು ಅಪರಿಚಿತ ಕಿಡಿಗೇಡಿಗಳಿಂದ ಈ ಘಟನೆ ನಡೆದಿದೆ . ಬೀಡಾಡಿ ಹಸುಗಳ ರಹಮತ್ ನಗರದಲ್ಲಿ ಆಡ್ಡಾಡುವಾಗ ಯಾರೋ ಕಿಡಿಗೇಡಿಗಳು ಆಸಿಡ್ ಹಾಗೂ ಕಾದಿರುವ ಎಣ್ಣೆ ಸುರಿದಿದ್ದಾರೆಂದು ಬಜರಂಗ ದಳ ಆರೋಪಿಸಿದೆ.
ಅಮಾನವೀಯ ಹಾಗೂ ವಿಕೃತಿಯ ದಾಳಿಯ ಪರಿಣಾಮ ಹಸುಗಳು ಸುಟ್ಟ ಗಾಯಗಳಿಂದ ಮೂಕ ರೋಧನೆಯ ನೋವು ಅನುಭವಿಸುತ್ತಿರುವುದು ಕಂಡಾಗ ಮಾನವೀಯತೆಯ ಮೃದು ಮನಸ್ಸುಗಳನ್ನು ಘಾಸಿಗೊಳ್ಳದೆ ಇರಲಾರದು.
ಗಾಯಗೊಂಡು ನರಳಾಡುವ ಹಸುಗಳನ್ನು ಕಂಡು ಆಕ್ರೋಶ ವ್ಯಕ್ತ ಪಡೆಸಿರುವ ಸ್ಥಳೀಯ ಬಜರಂಗದಳ ಹಾಗೂ ಹಿಂದುಪರ ಸಂಘಟನೆಗಳು ಹಸುಗಳನ್ನು ಈ ರೀತಿ ಚಿತ್ರಹಿಂಸೆ ನೀಡಿ ವಿಕೃತಿಯನ್ನು ಮೆರೆಯುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹ ಪಡೆಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂಥಹ ವಿಕೃತಿ ಘಟನೆಗಳು ಕಂಡು ಬಂದಲ್ಲಿ ಪರಿಣಾಮ ನೆಟ್ಟಗಿರದು ಎಂಬ ಎಚ್ಚರಿಸಿರುವ ಬಜರಂಗ ದಳವು ಗಾಯಗೊಂಡಿರುವ ಹಸುಗಳ ಮಾಲೀಕರ ನಿರ್ಲಕ್ಷತೆ ವಿರುದ್ದವು ಕ್ರಮ ಕೈಗೊಳ್ಳ ಬೇಕು. ಗಾಯಗೊಂಡಿರುವ ಹಸುಗಳನ್ನು ನಗರದಲ್ಲಿ ಹುಡುಕಿ ಅವುಗಳಿಗೆ ಕೊಡಲೇ ಚಿಕಿತ್ಸೆ ಕೊಡಿಸುವ ಕ್ರಮಕ್ಕೆ ಮುಂದಾಗ ಬೇಕೆಂದು ಸಂಬಂಧ ಪಟ್ಟವರನ್ನು ಒತ್ತಾಯಿಸಿದ್ದಾರೆ.
