ಉದಯವಾಹಿನಿ, ನವದೆಹಲಿ: ಹುಡುಗಿಯರು ಕೇವಲ ಮನೆಯ ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಕಾಲವಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಮಹಿಳೆಯರು ಪುರುಷರನ್ನು ಮೀರಿ ಬೆಳೆಯುತ್ತಿದ್ದಾರೆ. ಸೌಟು ಹಿಡಿಯುವುದರಿಂದಿಡಿದು ಗಡಿಯಲ್ಲಿ ಗನ್​ ಹಿಡಿಯುವವರೆಗೂ ಯಾವುದೇ ಕೆಲಸವಾಗಲಿ ಪುರುಷರ ಸಮಾನಕ್ಕೆ ಮಾಡುತ್ತಾರೆ.
ನಮ್ಮಲ್ಲಿ ಹೆಚ್ಚಿನವರು ಹಾವುಗಳನ್ನು ಕಂಡರೆ ಸಾಕು ತುಂಬಾ ಹೆದರುತ್ತಾರೆ. ಆದರೆ, ಹಾವುಗಳನ್ನು ಪಳಗಿಸುವವರು ಕೂಡ ನಮ್ಮ ನಡುವೆ ಇದ್ದಾರೆ. ಅವರನ್ನು ಉರಗ ರಕ್ಷಕರು ಎನ್ನುತ್ತೇವೆ. ಪುರುಷರಲ್ಲಿ ಮಾತ್ರ ನಾವು ಉರಗ ರಕ್ಷಕರನ್ನು ಕಾಣುತ್ತೇವೆ. ಆದರೆ, ಹಾವು ಹಿಡಿಯುವುದರಲ್ಲೂ ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಇಲ್ಲೊಬ್ಬ ಯುವತಿ ಸಾಬೀತು ಮಾಡಿದ್ದಾಳೆ. ತನಗೆ ಸೌಂದರ್ಯದ ಜತೆಗೆ ಧೈರ್ಯವೂ ಇದೆ ಎಂಬುದನ್ನು ನಿರೂಪಿಸಿದ್ದಾಳೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಪ್ರಕಾರ, ಸೈಬಾ ಎಂಬ ಯುವತಿ ಮನೆಯೊಂದರಲ್ಲಿ ಅಡಗಿದ್ದ ನಾಗರಹಾವನ್ನು ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಬರಿಗೈನಿಂದಲೇ ಹೊರತೆಗೆದಿದ್ದಾಳೆ. ಬಳಿಕ ಹಾವಿನೊಂದಿಗೆ ವಿವಿಧ ಫೋಟೋಗಳನ್ನು ತೆಗೆಸಿಕೊಂಡಿದ್ದಾಳೆ. ಹಾವನ್ನು ಹಿಡಿದು ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಹವ್ಯಾಸವನ್ನು ಸೈಬಾ ಬೆಳೆಸಿಕೊಂಡಿದ್ದಾರೆ. ಹಾವನ್ನು ರಕ್ಷಣೆ ಮಾಡಿರುವ ಸಾಕಷ್ಟು ವಿಡಿಯೋಗಳನ್ನು ಸೈಬಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!