ಉದಯವಾಹಿನಿ, ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ನಡುವೆ ನಡೆದ ವಾಟ್ಸಾಪ್‌ ಸಂದೇಶಗಳ ವಿವರಗಳನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.
ಇವರಿಬ್ಬರ ನಡುವೆ ಸುಮಾರು 65 ವಾಟ್ಸಾಪ್‌ ಸಂದೇಶಗಳು ರವಾನೆಯಾಗಿವೆ. ಆ ಪೈಕಿ ಅಶ್ಲೀಲ ಮೆಸೇಜ್‌ಗಳೂ ಇವೆ. ಈ ಎಲ್ಲ ಸಂದೇಶಗಳನ್ನೂ ಸಹ ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳ ಮೊಬೈಲ್‌ಗಳಿಂದ ರಿಟ್ರೀವ್‌ ಮಾಡಿ ಎಫ್‌ಎಸ್‌‍ಎಲ್‌ನಿಂದ ಮಾಹಿತಿ ಪಡೆದುಕೊಂಡು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ.
ಮೊದಲು ಪವಿತ್ರಾಗೌಡ ಮತ್ತು ರೇಣುಕಾಸ್ವಾಮಿ ವಾಟ್ಸಾಪ್‌ ಚಾಟ್‌ ಮಾಡುತ್ತಿದ್ದರು. ತದನಂತರ ಪವಿತ್ರಾಗೌಡ ಈ ವಿಷಯವನ್ನು ದರ್ಶನ್‌ ಸ್ನೇಹಿತ ಪವನ್‌ಗೆ ಹೇಳಿದ್ದರು. ಪವನ್‌ ಪವಿತ್ರಾಗೌಡ ಹೆಸರಿನಲ್ಲಿ ವಾಟ್ಸಾಪ್‌ ಮಾಡಿ ಖೆಡ್ಡಾಗೆ ಬೀಳಿಸಿಕೊಂಡು ಆತನ ಊರು, ವಾಸಸ್ಥಳದ ವಿಳಾಸ ಪತ್ತೆಹಚ್ಚಿದನು. ನಂತರ ಈ ವಿಷಯವನ್ನು ದರ್ಶನ್‌ಗೆ ತಿಳಿಸಿದ್ದಾನೆ. ದರ್ಶನ್‌ ಆತನನ್ನು ಅಪಹರಿಸಲು ಸಂಚು ರೂಪಿಸಿದ್ದರು. ಅದರಂತೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ನಗರದ ಪಟ್ಟಣಗೆರೆ ಶೆಡ್‌ಗೆ ಕರೆತಂದಿದ್ದರು.

 

Leave a Reply

Your email address will not be published. Required fields are marked *

error: Content is protected !!