ಉದಯವಾಹಿನಿ, ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಭೂಕುಸಿತದ ನಂತರ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಅವರ ಶವ ಪತ್ತೆಯಾಗಿದೆ.
ಶಿರೂರು ಭೂಕುಸಿತದ ನಂತರ ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ಇಂದು ಲಾರಿ ಚಾಲಕ ಅರ್ಜುನ್ ಅವರ ಶವ ಪತ್ತೆಯಾಗಿದೆ. ಅರ್ಜುನ್ ಸೇರಿದಂತೆ ಇಬ್ಬರ ಶವ ಪತ್ತೆಯಾಗಿದ್ದು, ಇನ್ನೊಂದು ಶವದ ಗುರುತು ಪತ್ತೆಯಾಗಿಲ್ಲ.
ಗುಡ್ಡ ಕುಸಿತದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ.ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಕೇರಳ ಮೂಲದ ಅರ್ಜುನ್ ಅವರ ಲಾರಿ ಹಾಗೂ ಅವರ ಶವ ನದಿಯಲ್ಲಿ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!