ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಲು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಅಂತ ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದಾರೆ.ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎನ್ನುವ ಹಿನ್ನಲೆಯಲ್ಲಿ ಅವರು ಈ ಬಗ್ಗೆ ಹೇಳಿದ್ದಾರೆ.ಗೃಹ ಸಚಿವ ಪರಮೇಶ್ವರ್ ಪೊಲೀಸರಿಗೆ ಹಣೆಗೆ ಕುಂಕುಮ, ವಿಭೂತಿ ಇಟ್ಟುಕೊಳ್ಳಬಾರದೆಂದು ಎಂದು ಗೃಹ ಸಚಿವರು ಹೇಳಿದ್ದರು, ಅಂತಹ ಸುದ್ದಿಯೊಂದು ವೈರಲ್ ಆದ ಬೆನ್ನಲೇ, ಈ ಬಗ್ಗೆ ಅವರು ತಿಳಿಸಿದ್ದಾರೆ.ಇನ್ನೂ ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಅವರು ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ನಿಯಮಗಳಿವೆ. ಸರ್ಕಾರದಲ್ಲಿ ಬ್ಲೂ ಬುಲ್ ಇದೆ ಅದರಲ್ಲಿ ಏನಿದೆಯೋ ಅದೇ ರೀತಿ ಆಗ್ಬೇಕು ಅಂಥ ತಿಳಿಸಿದರು.
