ಉದಯವಾಹಿನಿ, ಬೆಂಗಳೂರು: ಬಿಗ್‌ಬಾಸ್ ಸ್ಪರ್ಧಿ, ವಕೀಲ ಜಗದೀಶ್ ಮೇಲೆ ಹಲ್ಲೆ ನಡೆದಿದೆ. ಇದನ್ನು ಜಗದೀಶ್ ಅವರೇ ಸ್ವತಃ ವಿಡಿಯೋ ಮಾಡಿ ನನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದಿದ್ದಾರೆ.ವಿಡಿಯೋದಲ್ಲಿ ಮೂಗಿನಿಂದ ರಕ್ತ ಬರುತ್ತಿರುವುದನ್ನು ಕಾಣಬಹುದು. ಇದನ್ನು ನೋಡಿದ ಕೆಲವರು ಇದೆಲ್ಲ ಕರ್ಮದ ಫಲ ಎಂದು ಹೇಳಿದ್ದಾರೆ.ಈ ಹಿಂದೆ ಅಣ್ಣಾಮಲೈ ಅವರು ಚಾಟಿಯಿಂದ ಬಾರಿಸಿಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದ್ದರು. ಅದನ್ನು ಅಣಕು ಮಾಡಿ ಜಗದೀಶ್ ಅವರು ಅಣ್ಣಾಮಲೈ ಅವರನ್ನು ಅಪಹಾಸ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಭಾರೀ ತೀವ್ರ ಟೀಕೆ ವ್ಯಕ್ತವಾಗಿತ್ತು.
ಇದೀಗ ಜಗದೀಶ್ ಮೇಲೆ ಹಲ್ಲೆ ನಡೆದಿರುವುದನ್ನು ನೆಟ್ಟಿಗರು ಕರ್ಮದ ಫಲ ಎಂದಿದ್ದಾರೆ.  ಒಬ್ಬರು ಈ ವಿಡಿಯೋ ಪೋಸ್ಟ್ ಹಾಕಿ, ಕಲಿಯುಗದಲ್ಲಿ ಕರ್ಮದ ಫಲದಿಂದ ಹೇಗೆ ತಾನೇ ತಪ್ಪಿಸಿಕೊಳ್ಳಲು ಸಾಧ್ಯ ಮೊನ್ನೆಯಷ್ಟೇ ಅಣ್ಣಾಮಲೈ ಯವರನ್ನು ಟೀಕಿಸಲು ತನಗೆ ತಾನೇ ಹೊಡ್ಕೊಂಡ, ಇವತ್ತು ನೋಡಿದ್ರೆ ಸಿಕ್ಕ ಸಿಕ್ಕವರ ಕೈಯಿಂದ ಒದೆ ತಿಂತಾ ಇದ್ದಾನೆ.

Leave a Reply

Your email address will not be published. Required fields are marked *

error: Content is protected !!