ಉದಯವಾಹಿನಿ, ಗೋರಖ್ಪುರ (ಉತ್ತರ ಪ್ರದೇಶ): ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತ ಇಬ್ಬರು ಮಹಿಳೆಯರು ಮನೆ ತೊರೆದು ಪರಸ್ಪರ ಮದುವೆಯಾಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ. ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ರು ಡಿಯೋರಿಯಾದ ಚೋಟಿ ಕಾಶಿ ಎಂದೂ ಕರೆಯಲ್ಪಡುವ ಶಿವ ದೇವಾಲಯದಲ್ಲಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇಬ್ಬರೂ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಮೂಲಕ ಪರಿಚಯವಾಗಿದ್ದು, ಇಬ್ಬರ ಗಂಡಂದಿರು ಕೂಡ ಮದ್ಯದ ಚಟಕ್ಕೆ ದಾಸರಾಗಿದ್ದಲ್ಲದೇ, ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದರು. ಇಬ್ಬರದು ಬಹುತೇಕ ಒಂದೇ ರೀತಿಯ ಪರಿಸ್ಥಿತಿ ಇದ್ದ ಹಿನ್ನೆಲೆ ಅವರು ಆಪ್ತರಾಗಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೇಗುಲದಲ್ಲಿ ಮದುವೆ ಆಗುವಾಗ ಗುಂಜಾ ವರನ ಪಾತ್ರ ನಿರ್ವಹಿಸಿದ್ದು, ಕವಿತಾ ಹಣೆಗೆ ಸಿಂಧೂರ ಹಚ್ಚಿದ್ದಾರೆ. ಬಳಿಕ ಪರಸ್ಪರ ಹಾರ ಬದಲಾಯಿಸಿಕೊಂಡು, ಸಪ್ತಪದಿ ತುಳಿದಿದ್ದಾರೆ.
