
ಉದಯವಾಹಿನಿ, ಮೂಡಿಗೆರೆ: ತಾಲ್ಲೂಕಿನ ಕೆಳಗೂರು ಗ್ರಾಮದ ಲೂರ್ದ್ ಮಾತೆ ಮರಿಯಮ್ಮನವರ ಕೇಂದ್ರದಲ್ಲಿ ಗವಿ ಉತ್ಸವದ ಅಂಗವಾಗಿ ಫೆ.13ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 16ರಂದು ಗವಿ ಉತ್ಸವ ನಡೆಯಲಿದೆ.ಫೆ.13ರಿಂದ ಪ್ರತಿ ದಿನ ಸಂಜೆ 6 ಗಂಟೆಗೆ ನೊವೆನಾ ಪ್ರಾರ್ಥನೆ ನಡೆಯಲಿದೆ. ಉತ್ಸವದ ದಿನ ಸಂಜೆ 5.30ಕ್ಕೆ ಹಿರೇಬೈಲ್ ಸಂತ ಜೋಸೆಫರ ಚರ್ಚ್ ಫಾ. ಡೇವಿಡ್ ಪ್ರಕಾಶ್, ಸಕಲೇಶಪುರ ಚರ್ಚ್‌ನ ಫಾ. ಎಲಿಯಾಸ್ ಸಿಕ್ಕೇರಾ ನೇತೃತ್ವದಲ್ಲಿ ಗವಿಯಲ್ಲಿ ಜಪಸರ ಪ್ರಾರ್ಥನೆ ಹಾಗೂ ಹಬ್ಬದ ಬಲಿಪೂಜೆ ನಡೆಯಲಿದೆ.’ಮಾತೆ ಮರಿಯಮ್ಮನವರ ಗವಿ ಉತ್ಸವವನ್ನು ಸರ್ವಧರ್ಮೀಯರೂ ಆಚರಿಸುತ್ತಾರೆ. ಹರಕೆಗಳು ಈಡೇರಿದ್ದರ ಫಲವಾಗಿ ಭಕ್ತರು ಮೊಂಬತ್ತಿ ಹಚ್ಚಿ ಹರಕೆ ತೀರಿಸುತ್ತಾರೆ’ ಎಂದು ಇಲ್ಲಿನ ಕಾರ್ಮಿಕ ಜಾನ್ ನೊರೋನ್ನಾ ಹೇಳಿದರು.
‘ಗವಿ ಉತ್ಸವಕ್ಕೆ ಸೇರುವ ಅಪಾರ ಸಂಖ್ಯೆಯ ಭಕ್ತರ ಸಮಾಗಮ ಅನ್ನೋನ್ಯತೆಗೆ ಉತ್ತಮ ಸಾಕ್ಷಿಯಾಗಿದೆ ಎಂದು ಧರ್ಮಗುರು ಫಾ. ಡೇವಿಡ್ ಪ್ರಕಾಶ್ ಅಭಿಪ್ರಾಯಪಟ್ಟರು.
