
ಉದಯವಾಹಿನಿ, ಕಡೂರು: ‘ಆಕಾಶ ಹೊಳೆಯಿತೋ ಭೂಮಿ ಬೆಳಗೀತಲೇ ಪರಾಕ್…’ ಇದು ತಾಲ್ಲೂಕಿನ ಜಿಗಣೇಹಳ್ಳಿಯ ಮೈಲಾರ ಲಿಂಗೇಶ್ವರಸ್ವಾಮಿ ಕಾರಣಿಕ ಮೈಲಾರ ಲಿಂಗೇಶ್ವರಸ್ವಾಮಿ ಕಾರಣಿಕ ನುಡಿ.ಭಾರತ ಹುಣ್ಣಿಮೆ ಪ್ರಯುಕ್ತ ಬುಧವಾರ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ವ್ರತ ಕೈಗೊಂಡಿದ್ದ ಕಾರಣಿಕ ನುಡಿಯವ ಗಣಮಗ ಜಿಗಣೇಹಳ್ಳಿ ಮಂಜುನಾಥ್, ವಾದ್ಯವೃಂದದಲ್ಲಿ ವೇದಾನದಿ ತೀರಕ್ಕೆ ಬಂದು ವಿಧಿಗಳನ್ನು ಪೂರೈಸಿದರು.
ಬಿಲ್ಲನೇರಿ ಸದ್ದಲೇ….ಎಂದು ಕೂಗಿದಾಗ ಸುತ್ತಲೂ ನಿಶಬ್ದ ಆವರಿಸಿತು.
‘ಆಕಾಶ ಹೊಳೆಯಿತೋ.. ಭೂಮಿ ಬೆಳಗಿತಲೇ ಪರಾಕ್ ಎಂಬ ಕಾರಣಿಕ ನುಡಿಗೆ ಜನರು ಹರ್ಷೋದ್ಘಾರ ಮಾಡಿದರು.’ಈ ವರ್ಷ ಸಮೃದ್ಧಿಯಾಗಿ ಮಳೆಯಾಗುತ್ತದೆ. ಭೂಮಿ ಸಮ್ಮದ ಹಸಿರಿನಿಂದ ಬೆಳಗುತ್ತದೆ’ ಎಂದು ಕಾರಣಿಕದ ನುಡಿಯನ್ನು ಸೇರಿದ್ದವರು ಅರ್ಥೈಸಿದರು. ಮೈಲಾರಲಿಂಗೇಶ್ವರ ಪೌರ್ಣಮಿ ಸೇವಾ ಸಮಿತಿ ಮುಖ್ಯಸ್ಥರು, ಜಿಗಣೇಹಳ್ಳಿ ಗ್ರಾಮಸ್ಥರು ಇದ್ದರು.
