ಉದಯವಾಹಿನಿ , ನವದೆಹಲಿ: ವಿರಾಟ್ ಕೋಹ್ಲಿ ಮತ್ತೆ ತಮ್ಮ ಫಾರ್ಮ್ ಗೆ ಮರಳಬೇಕಾದರೆ ಅವರು ದೇಶಿಯ ಕ್ರಿಕೆಟ್‌ ನಲ್ಲಿ ಆಡಬೇಕು ಎಂದು ಮಾಜಿ ಕ್ರಿಕೆಟಿಗೆ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.ವಿರಾಟ್ ಕೊಹ್ಲಿ ಸ್ಪಿನ್ ವಿರುದ್ಧ ಹೋರಾಡುತ್ತಿರುವ ತೊಂದರೆ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪ್ರದರ್ಶನ ನೀಡಲು ಅಸಮರ್ಥತೆಯ ಬಗ್ಗೆ  ಕಾರ್ತಿಕ್ ತಮ್ಮ ಕಳವಳ ವ್ಯಕ್ತಪಡಿಸಿದರು.

12 ವರ್ಷಗಳ ನಂತರ ಭಾರತವು ತಮ್ಮ ತವರು ನೆಲದಲ್ಲಿ ಸರಣಿ ಸೋಲನ್ನು ಅನುಭವಿಸಿದಾಗ ಪುಣೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ 2 ನೇ ಟೆಸ್ಟ್‌ ನಲ್ಲಿ ಕೊಹ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಎಡಗೈ ಸ್ಪಿನ್ನರ್‌ ಮಿಚೆಲ್ ಸ್ಯಾಂಟ್ನರ್ ಅವರಿಗೆ ಎರಡೂ ಸಂದರ್ಭಗಳಲ್ಲಿ ಔಟಾದ ಕಾರಣ ಕೊಹ್ಲಿ ಎರಡು ಇನ್ನಿಂಗ್ಸ್‌ ಗಳಲ್ಲಿ ಕೇವಲ 1 ಮತ್ತು 17 ರನ್ ಮಾತ್ರ ಗಳಿಸಿದ್ದರು.
ವಿರಾಟ್ ಕೊಹ್ಲಿಗೆ ಇದು ಸುಲಭವಲ್ಲ, ಸರಣಿ ಅವರಿಗೆ ಉತ್ತಮವಾಗಿಲ್ಲ, ನಾಲ್ಕು ಇನ್ನಿಂಗ್ಸ್ ಗಳಲ್ಲಿ ಮೂರು ಬಾರಿ ಅವರು ನಿರಾಶೆಗೊಳಿಸಿದ್ದಾರೆ. ಇದು ಸ್ಪಷ್ಟವಾಗಿಯೂ ಸ್ಪಿನ್ನರ್‌ಗಳು ಅವರನ್ನು ತೊಂದರೆಗೊಳಿಸಿರುವ ಪುನರಾವರ್ತನೆಯಾಗುತ್ತಿದೆ ಎಂದು ಅವರು ಕ್ರಿಕ್‌ಬಜ್‌ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
2021 ರಿಂದ 50 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿಸ್ಪಿನ್ ವಿರುದ್ಧ ಆತಂಕಕಾರಿ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿಸಿನ್ ವಿರುದ್ಧ 24 ಬಾರಿ ಔಟಾಗಿದ್ದಾರೆ ಮತ್ತು ಈ ಸ್ವರೂಪದಲ್ಲಿ 33.38 ಸರಾಸರಿಯನ್ನು ಹೊಂದಿದ್ದಾರೆ. ಜುಲೈ 2023 ಕೊಹ್ಲಿ ಕೊನೆಯ ಬಾರಿಗೆ ಟೆಸ್ಟ್ ಶತಕ ಬಾರಿಸಿದರು. ಇದು ಅವರ 29 ನೇ ಶತಕವಾಗಿತ್ತು. ಹೀಗಾಗಿ ಅವರು ಮತ್ತೆ ಫಾರ್ಮ್‌ಗೆ ಮರಳಬೇಕಾದರೆ ದೇಶಿಯ ಕ್ರಿಕೆಟ್ ಆಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!