ಉದಯವಾಹಿನಿ, ಮಂಗಳೂರು: 14ರಿಂದ ನಡೆಯಲಿರುವ ‘ಎಎಂಎಸ್‌ಸಿ ಡರ್ಟ್ ಪ್ರಿಕ್ಸ್ 8’ ಮೋಟರ್ ಸ್ಪೋರ್ಟ್ಸ್ ಮಹೋತ್ಸವದ ಅಂಗವಾಗಿ 16ರಂದು ನಗರದ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮೋಟರ್ ರೇಸ್ ನಡೆಯಲಿದೆ.ಮಾಂಡೋವಿ ಮೋಟರ್ಸ್, ವಾಮಿ ಮೆರ್‌ಲಾ ಮತ್ತು ಶೂಲಿನ್ ಗ್ರೂಪ್ ಸಹಯೋಗದಲ್ಲಿ ಮಂಗಳೂರು ಮೋಟರ್ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸಿರುವ ರೇಸ್ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಹಾರಾಷ್ಟ್ರ, ಗೋವ, ಮೇಘಾಲಯ ತಮಿಳುನಾಡು, ರಾಜ್ಯದ ಚಿಕ್ಕಮಗಳೂರು, ಕೊಡಗಿನ ರೇಸರ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕ ಧನುಷ್ ತಿಳಿಸಿದರು.
1.5 20 A ವಿಭಾಗಗಳಲ್ಲಿ ನಾಲ್ಕು ಚಕ್ರ ವಾಹನಗಳ ಸ್ಪರ್ಧೆ ನಡೆಯಲಿದೆ. ಅಖಿಲ ಭಾರತ ರಾಲಿ ಚಾಂಪಿಯನ್‌ಷಿಪ್‌ನ (ಐಎನ್‌ಆರ್‌ಸಿ) ಮಾಜಿ ಚಾಂಪಿಯನ್ ಮಂಗಳೂರಿನ ಆರೂರು ವಿಕ್ರಂ ರಾವ್ ಪ್ರಮುಖ ಆಕರ್ಷಣೆ ಆಗಿದ್ದು ಚಿಕ್ಕಮಗಳೂರಿನ ಐಮನ್ ಅಹಮ್ಮದ್, ರೂಪೇಶ್
ಬಿ.ಸಿ, ಕೇರಳದ ಅತುಲ್ ಥಾಮಸ್ ಅವರೂ ಪಾಲ್ಗೊಳ್ಳಲಿದ್ದಾರೆ.
