ಉದಯವಾಹಿನಿ, ಮಂಗಳೂರು: ಆಕೆಗೆ ಮದುವೆ ಗೊತ್ತಾಗಿತ್ತು. ಮನೆಯಲ್ಲಿ ಖುಷಿ ತುಂಬಿತ್ತು. ಆದರೆ ರಸ್ತೆ ಅಪಘಾತ ಆಕೆಯ ಪ್ರಾಣವನ್ನೇ ಅಪಹಿರಿಸಿತು.ಅದರೊಂದಿಗೆ ಇಡೀ ಕುಟುಂಬದ ನೆಮ್ಮದಿ ಕಳೆದು ಹೋಯಿತು…
ಕ್ರಿಸ್ ಕ್ರಿಸ್ಟ್ ಕ್ರಾಸ್ತ ತಮ್ಮ ಕುಟುಂಬದಲ್ಲಿ ನಡೆದ ದುರಂತದ ಬಗ್ಗೆ ಹೇಳುತ್ತಿದ್ದಂತೆ ಸಭಿಕರು ಸ್ವಬ್ರರಾದರು.
ವೇದಿಕೆ ಮೇಲೆ ಕುಳಿತವರೂ ಬೇಸರಗೊಂಡರು.

ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ಸಾರಿಗೆ ಇಲಾಖೆ ವತಿಯಿಂದ ಪಿಜಾ ಬೈ ನೆಕ್ಸಸ್‌ನಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆಸುರಕ್ಷತಾ ಮಾಸಾಚರಣೆಯಲ್ಲಿ ಕಣ್ಣೀರ ಕಥೆಯೊಂದಿಗೆ ಅರಿವು ಮೂಡಿಸುವ ಉದ್ದೇಶದಿಂದ ಕ್ರಿಸ್ಟಿ ಬಂದಿದ್ದರು. ಕಳೆದ ವರ್ಷ ಜುಲೈ ಈಗಲೂ ಕಣ್ಣೀರು ಕಾಕುತ್ತಿದ್ದಾರೆ ಎಂದು ಅವರು ಹೇಳಿದರು.
ರೀಮಾ ಮಾತನಾಡಿ ‘ಮಗ ಯಾರಿಗೂ ತಿಳಿಯದೆ ವಾಹನ ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದ ಮಕ್ಕಳಿಗೆ 25 ವರ್ಷ ಆಗುವ ವರೆಗೆ ವಾಹನ ಕೊಡಬೇಡಿ. ನಂತರ ಕೊಟ್ಟರೂ ಸಾಕಷ್ಟು ಅರಿವು ಮೂಡಿಸಲು ಮರೆಯಬೇಡಿ’ ಎಂದರು. ‘ಕಮಿಷನರೇಟ್‌ನ ಕಾನ್‌ಸ್ಟೆಬಲ್ ಒಬ್ಬರು ಮದುವೆ ಎಂಗೇಜ್ಮೆಂಟ್ ಮುಗಿಸಿ ಬರುವಾಗ ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಅವರು ಹೆಲ್ಮಟ್ ಧರಿಸಿದರೂ ಅದರ ಪಟ್ಟಿಯನ್ನು ಬಿಗಿ ಮಾಡಿರಲಿಲ್ಲ. ವಾಹನದಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯವಾಗುತ್ತದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.
ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಮಂಗಳೂರಿನಲ್ಲಿ ವಾರಾಂತ್ಯದಲ್ಲಿ ಹೆಚ್ಚುತ್ತಿದ್ದು ಅವರನ್ನು ನಿಯಂತ್ರಿಸಲು ಭಾರಿ ಪ್ರಯತ್ನ ಆಗುತ್ತಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ವರ್ಷ ರಸ್ತೆ ಅಪಘಾತದಲ್ಲಿ 110 ಕುಟುಂಬಗಳು ತಮ್ಮ ಆಪ್ತರನ್ನು ಕಳೆದುಕೊಂಡಿವೆ. ಯುವ ಸಮುದಾಯವೇ ಇದಕ್ಕೆ ಹೆಚ್ಚು ಬಲಿಯಾಗುತ್ತಿವೆ’.

Leave a Reply

Your email address will not be published. Required fields are marked *

error: Content is protected !!