ಉದಯವಾಹಿನಿ, ಬೆಂಗಳೂರು: ಇನ್ವೆಸ್ಟ್ ಕರ್ನಾಟಕ,ಜಾಗತಿಕ ಹೂಡಿಕೆದಾರರ ಸಮಾವೇಶ ೨೦೨೫ ದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಜೈವಿಕ ಇಂಧನ ಕ್ಷೇತ್ರದಲ್ಲಿ ಮಂಡಳಿ ಕಳೆದ ಒಂದು ದಶಕದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯ ಯೋಜನೆಗಳು ಹಾಗೂ ಮಂಡಳಿಯು ಮುಂದಿನ ದಿನಗಳಲ್ಲಿ ರೂಪಿಸಲಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಮಳಿಗೆಯನ್ನು ಆಯೋಜಿಸಿದೆ.
ಸಮಾವೇಶದ ಸಮಾರೂಪ ಸಮಾರಂಭದಲ್ಲಿ ಭಾಗಿಯಾಗಿದ್ದ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಲೋಕಸಭಾ ಸದಸ್ಯ ಶಶಿ ತರೂರ್, ಶಾಸಕರು ಹಾಗೂ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಅವರು ಮಂಡಳಿಯ ಮಳಿಗೆಗೆ ಭೇಟಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಮಂಡಳಿಯ ಜೈವಿಕ ಇಂಧನ ಕಾರ್ಯಯೋಜನೆಗಳಾದ ಬಯೋ ಡೀಸೆಲ್, ಬಯೋ ಬ್ರಿಕೇಟ್, ಪೈಲೆಟ್, ಕಂಪ್ರೆಸ್ಟ್ ಬಯೋ ಗ್ಯಾನ್ ಮುಂತಾದವುಗಳ ಕುರಿತು ಶಶಿ ತರೂರ್ ಅವರಿಗೆ ಪರಿಚಯ ಮಾಡಿಕೊಟ್ಟರು. ಮಂಡಳಿಯ ಅಧ್ಯಕ್ಷ ಎಸ್ ಈ ಸುಧೀಂದ್ರ ಅವರು ಮಂಡಳಿಯ ಜೈವಿಕ ಇಂಧನ ಕಾರ್ಯ ಯೋಜನೆಗಳು ಹಾಗೂ ಮುಂದಿನ ದಿನಗಳಲ್ಲಿ ಮಂಡಳಿಯು ಕೈಗೊಳ್ಳಲಿರುವ ಉನ್ನತೀಕರಣ ಹಾಗೂ ವಾಣಿಜೀಕರಣ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
