ಉದಯವಾಹಿನಿ, ಮಂಡ್ಯ: ನೋಟಿನ ಮಧ್ಯೆ ಬಿಳಿ ಹಾಳಿ ಇಟ್ಟು ಯಾಮಾರಿಸಲು ಮುಂದಾದ ವ್ಯಕ್ತಿಗೆ ಸಾರ್ವಜನಿಕರು ಧರ್ಮಧೇಟು ಕೊಟ್ಟಂತ ಘಟನೆ ಮಂಡ್ಯದ ಉಪನೊಂದಣಿ ಕಚೇರಿ ಬಳಿ ನಡೆದಿದೆ.ಮಂಡ್ಯದ ಕಾಳೇನಹಳ್ಳಿ ಗ್ರಾಮದ ಉಮೇಶ್ ಎಂಬುವವರು ತಮ್ಮ ಪ್ರಾಪರ್ಟಿ ಮಾರಾಟ ಮಾಡಲು ಮುಂದಾಗಿದ್ದರು.ಹಿಗಾಗಿ ಮಂಡ್ಯ ನಗರದ ಸಬ್ದರಿಯಬಾದ್ ನಿವಾಸಿ ಸಯ್ಯದ್ ಆರುನ್ ತಮೀಮ್ ಎಂಬ ವ್ಯಕ್ತಿ ಪ್ರಾಪರ್ಟಿ ಖರೀದಿ ಮಾಡಲು ಮುಂದಾಗಿದ್ದರು. ಹಿಗಾಗಿ ಶುಕ್ರವಾರ ನಗರದ ಉಪನೊಂದಣಿ ಕಚೇರಿಗೆ ಎರಡೂ ಕಡೆಯವರು ಆಗಮಿಸಿದ್ದರು. ಈ ವೇಳೆ ಮೊದಲೇ ಮಾತುಕತೆ ನಡೆಸಿದಂತೆ ಸಯ್ಯದ್ ಆರುನ್ ನೊಂದಣಿ ಬಳಿಕ ಉಳಿಕೆ ಹಣ 30 ಲಕ್ಷ ಕೊಡೋದಾಗಿ ಹೇಳಿ ನೋಟಿನ ಮಧ್ಯೆ ಬಿಳಿ ಹಾಳೆಯ ಕಂತೆಯನ್ನ ಇಟ್ಟು ಯಾಮಾರಿಸಿದ್ದಾರೆ. ಇದ್ರಿಂದ ಉಪನೊಂದಣಿ ಕಚೇರಿ ಬಳಿ ಇದ್ದ ಸಾರ್ವಜನಿಕರು ಆರುನ್ ನನ್ನ ಹಿಡಿದು ಥಳಿಸಿದ್ದು, ಮಂಡ್ಯದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ
