ಉದಯವಾಹಿನಿ, ಸರಿಯಾದ ಸಮಯದಲ್ಲಿ ಉತ್ತಮ ಆಹಾರಗಳನ್ನು ಸೇವಿಸುವುದು ಅವಶ್ಯವಾಗಿದೆ. ಜನರು ಆರೋಗ್ಯಕರ ಆಹಾರಗಳನ್ನು ತಪ್ಪಾದ ಸಮಯದಲ್ಲಿ ಸೇವನೆ ಮಾಡುತ್ತಾರೆ. ಇದರ ಪರಿಣಾಮವಾಗಿ ದೇಹದ ತೂಕವನ್ನು ಹೆಚ್ಚಾಗುವುದು, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಳಿತವಾಗುತ್ತದೆ. ಜೊತೆಗೆ ನಿದ್ರೆಯ ಅಡಚಣೆಯಾಗುತ್ತದೆ. ಈ ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುವಂತಹ ಅಭ್ಯಾಸವನ್ನು ತಪ್ಪಿಸಬೇಕಾಗುತ್ತದೆ. ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಪ್ರತಿ ಊಟದ ಸಮಯ ಹಾಗೂ ನಾವು ಸೇವನೆ ಮಾಡುವ ಆಹಾರದ ಬಗ್ಗೆಯು ಕೂಡ ವಿಶೇಷ ಗಮನ ಹರಿಸಬೇಕಾಗುತ್ತದೆ.

ಊಟಕ್ಕೆ ಸರಿಯಾದ ವೇಳಾಪಟ್ಟಿ ಹಾಗೂ ಆಹಾರದ ಅನುಕ್ರಮ ನಿರ್ವಹಿಸಿದರೆ, ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೇ ಜೀರ್ಣಕ್ರಿಯೆ, ಶಕ್ತಿಯ ಮಟ್ಟ ವೃದ್ಧಿಸುವುದು ಹಾಗೂ ನಿದ್ರೆಗೆ ಸಂಬಂಧಿಸಿದ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಪ್ಪಿಸಬಹುದು. ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬೇಕು? ಇವುಗಳನ್ನು ಯಾವಾಗ ತಿನ್ನುವುದು ಉತ್ತಮ ಹಾಗೂ ಯಾವಾಗ ಸೇವಿಸಬಾರದು ಎಂಬುದನ್ನು ಅರಿತುಕೊಳ್ಳೋಣ.

ಕೆಂಪು ಮಾಂಸ: ಕೆಂಪು ಮಾಂಸ ಸೇವನೆ ಮಾಡಿದರೆ ಭಾರವಾಗಿರುತ್ತದೆ, ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆಯ ಮೇಲೆ ಗಮನಾರ್ಹ ಒತ್ತಡ ಉಂಟಾಗುತ್ತದೆ. ಸಂಜೆ ಇದನ್ನು ತಿನ್ನುವುದರಿಂದ ನಿಮ್ಮ ನಿದ್ರೆಯ ಮಾದರಿಗಳಿಗೆ ಅಡ್ಡಿಯಾಗಬಹುದು. ಬದಲಾಗಿ ನಿಮ್ಮ ಮಧ್ಯಾಹ್ನದ ಊಟದಲ್ಲಿ ಕೆಂಪು ಮಾಂಸ ಸೇರಿಸುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನಿಮ್ಮ ದೇಹವು ಅಗತ್ಯವಾದ ಪ್ರೋಟೀನ್ ಅನ್ನು ಪಡೆಯುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಅನ್ನ: ಅನ್ನ ವೇಗವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಆಗಿದೆ. ಇದರ ಪರಿಣಾಮವಾಗಿ ರಾತ್ರಿಯಲ್ಲಿ ಅದನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ವಾಸ್ತವವಾಗಿ ರಾತ್ರಿಯಲ್ಲಿ ದೇಹದ ಶಕ್ತಿಯ ಅವಶ್ಯಕತೆಗಳು ಕಡಿಮೆ ಆಗುವುದರಿಂದ ಅನ್ನದಿಂದ ಬರುವ ಕಾರ್ಬೋಹೈಡ್ರೇಟ್‌ಗಳನ್ನು ಸುಲಭವಾಗಿ ದೇಹದ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ರಾತ್ರಿ ಭೋಜನಕ್ಕಿಂತ ಮಧ್ಯಾಹ್ನದ ಊಟದಲ್ಲಿ ಅನ್ನವನ್ನು ಸೇರಿಸುವುದು ಉತ್ತಮ. ಮಧ್ಯಾಹ್ನ ಅನ್ನ ತಿನ್ನುವುದರಿಂದ ದೇಹಕ್ಕೆ ತಕ್ಷಣವೇ ಶಕ್ತಿ ಲಭಿಸುತ್ತದೆ. ದೇಹದ ತೂಕ ನಿಯಂತ್ರಣದಲ್ಲಿ ಇಡಲು ತುಂಬಾ ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!