ಉದಯವಾಹಿನಿ, ಪ್ರಸ್ತುತ ವಿಶ್ವ ಕ್ರಿಕೆಟ್ನ ಬೆಸ್ಟ್ ಆಲ್‌ರೌಂಡರ್ ಯಾರು ಎಂಬು ಪ್ರಶ್ನೆ ಬಂದರೆ ಅದಕ್ಕೆ ಹಲವರ ಉತ್ತರ ಹಾರ್ದಿಕ್ ಪಾಂಡ್ಯ ಎಂದಾಗಿರುವುದರಲ್ಲಿ ಅನುಮಾನವಿಲ್ಲ. ಸೀಮಿತ ಓವರ್ಗಳಲ್ಲಿ ಹಾರ್ದಿಕ್ರಂತಹ ಪರಿಣಾಮಕಾರಿ ಆಲ್‌ರೌಂಡರ್ ಮತ್ತೊಬ್ಬರಿಲ್ಲ. ಭಾರತ ತಂಡ ಎರಡೆರಡು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅಪಾರ. ಇಂತಹ ಹಾರ್ದಿಕ್ ಪಾಂಡ್ಯ ತನ್ನ ಆದರ್ಶ ವ್ಯಕ್ತಿಯನ್ನು ಬದಲಾಯಿಸಿದ್ದಾರೆ. ವಾಸ್ತವವಾಗಿ ಕ್ರಿಕೆಟ್ನ ಆರಂಭಿಕ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಬಳಿ ನಿಮ್ಮ ಐಡಲ್ ಯಾರು ಎಂಬ ಪ್ರಶ್ನೆ ಕೇಳಿದರೆ ಅವರಿಂದ ಬರುತ್ತಿದ್ದ ಉತ್ತರ, ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಗಿತ್ತು. ಹಾರ್ದಿಕ್ ಹಲವು ಬಾರಿ ಪಠಾಣ್ ಅವರ ಹೆಸರನ್ನು ಪುನರುಚ್ಚರಿಸಿದ್ದಾರೆ. ಆದರೆ ಇದೀಗ ಹಾರ್ದಿಕ್ ಅವರ ಐಡಲ್ ಬದಲಾಗಿದ್ದಾರೆ.
2015 ರಲ್ಲಿ ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಅವರು ಇರ್ಫಾನ್ ಪಠಾಣ್ ಅವರನ್ನು ತಮ್ಮ ಐಡಲ್ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಕಾರಣವನ್ನು ನೀಡಿದ್ದ ಹಾರ್ದಿಕ್, ‘ಇರ್ಫಾನ್ ಪಠಾಣ್, ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಹೀಗಾಗಿ ಅವರು ಬೆಸ್ಟ್ ಸರಿಯಾದ ಆಲ್‌ರೌಂಡರ್. ಆದ್ದರಿಂದ ನಾನು ಬಾಲ್ಯದಿಂದಲೂ ಅವರನ್ನು ಅನುಸರಿಸುತ್ತಿದ್ದೇನೆ. ಅವರಂತೆಯೇ, ನಾನು ಕೂಡ ಆಲ್‌ರೌಂಡರ್. ಬರೋಡಾ ಪರ ಆಡುವಾಗ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದಿದ್ದರು.
