ಉದಯವಾಹಿನಿ, ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇದೀಗ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ಅತ್ತೆ ಸಾವನ್ನಪ್ಪಿದ್ದು 8 ತಿಂಗಳ ಗರ್ಭಿಣಿ ಮತ್ತು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿರುವಂತಹ ಘಟನೆ ಕಾರವಾರದ ಪಿಕಳೆ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮೀ ಪಾಗಿ ಮೃತ ಮಹಿಳೆ. ಸ್ಥಳಕ್ಕೆ ಹೆಚ್ಚುವರಿ ಡಿಸಿ ಮತ್ತು ನಗರಸಭೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು..? ಗರ್ಭಿಣಿ ಸೊಸೆ ಸುನಿತಾಗೆ ಜ್ವರ ಹಿನ್ನೆಲೆ ಅತ್ತೆ ಲಕ್ಷ್ಮೀ ಆಸ್ಪತ್ರೆಗೆ ಕರೆತಂದಿದ್ದಾರೆ. ಪಿಕಳೆ ಆಸ್ಪತ್ರೆ ಎದುರು ಮರದ ಕೆಳಗೆ ಚಾಲಕ ಕಾರು ನಿಲ್ಲಿಸಿದ್ದ. ಭಾರೀ ಮಳೆ ಹಿನ್ನಲೆ ಮರವೊಂದು ಧರೆಗುರುಳಿದೆ. ಮರ ಬೀಳುವುದನ್ನು ಗಮನಿಸಿದ ಸುನಿತಾ ಮತ್ತು ಚಾಲಕ ತಕ್ಷಣ ಕೆಳಗಿಳಿದಿದ್ದಾರೆ. ಆದರೆ ಡೋರ್ ತೆಗೆಯುವುದು ತಡವಾದರಿಂದ ಲಕ್ಷ್ಮೀ ಕಾರಿ ಒಳಗಡೆ ಸಿಲುಕಿದ್ದಾರೆ.
