ಉದಯವಾಹಿನಿ , ಮನೆಯಲ್ಲಿ ಮಾಡುವ ರಚಿಕರವಾದ ತಿಂಡಿಗಳಲ್ಲಿ ಕೆಲವೊಂದು ಸಣ್ಣ ಸ್ನ್ಯಾಕ್ಸ್‌ಗಳು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುತ್ತವೆ. ಅಂಥದ್ದೇ ಒಂದು ರುಚಿಕರವಾದ, ಸುಲಭವಾಗಿ ಮಾಡುವ ಮತ್ತು ಟೀ ಅಥವಾ ಕಾಫಿಯ ಜೊತೆಗೆ ಅದ್ಭುತವಾಗಿ ಹೊಂದಿಕೊಳ್ಳುವ ತಿಂಡಿ ಎಂದರೆ ಗೋಡಂಬಿ ಫ್ರೈ
ಹೊರಗೆ ಖಾರವಾಗಿ, ಒಳಗೆ ಸ್ವಲ್ಪ ಮೃದುವಾಗಿ ಇರುವ ಈ ಮಸಾಲಾ ಗೋಡಂಬಿ ಫ್ರೈ ಒಂದ್ಸಾರಿ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವಷ್ಟು ರುಚಿಯಾಗಿರುತ್ತದೆ. ಮನೆಯಲ್ಲೇ ಲಭ್ಯವಿರುವ ಪದಾರ್ಥಗಳಿಂದ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಇದರ ಸಿಂಪಲ್ ರೆಸಿಪಿ ಇಲ್ಲಿದೆ:
ಗೋಡಂಬಿ ಫ್ರೈ ಅಂದರೆ ಕೇವಲ ಕರಿದ ಗೋಡಂಬಿ ಅಲ್ಲ. ಇದು ಕಡಲೆಹಿಟ್ಟು, ಅಕ್ಕಿ ಹಿಟ್ಟು ಮತ್ತು ಮಸಾಲೆಗಳ ಸಂಯೋಜನೆಯಿಂದ ತಯಾರಾಗುವ ಖಾರವಾದ ಸ್ನ್ಯಾಕ್. ಗೋಡಂಬಿಯ ಸ್ವಾಭಾವಿಕ ಸಿಹಿತನಕ್ಕೆ ಮಸಾಲೆಯ ಖಾರ ಸೇರುತ್ತದೆ. ಹೊರಪದರ ಖಾರವಾಗಿದ್ದು, ಕರಿಯುವಾಗ ಬರುವ ಸುಗಂಧವೇ ಮನಸ್ಸನ್ನು ಸೆಳೆಯುತ್ತದೆ. ಈ ತಿಂಡಿ ದೀರ್ಘಕಾಲ ಕಟಕಟೆಯಾಗಿಯೇ ಇರುತ್ತದೆ ಎಂಬುದು ಮತ್ತೊಂದು ಪ್ಲಸ್ ಪಾಯಿಂಟ್.
ಒಂದು ಬಟ್ಟಲು ಗೋಡಂಬಿ, ಮುಕ್ಕಾಲು ಬಟ್ಟಲು ಕಡಲೆಹಿಟ್ಟು
ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಅರಿಶಿನ ಪುಡಿ, ಅರ್ಧ ಚಮಚ ಖಾರದ ಪುಡಿ
ಸ್ವಲ್ಬ ಚಾಟ್ ಮಸಾಲ, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಅಗತ್ಯವಿದ್ದಷ್ಟು ಎಣ್ಣೆ
