ಉದಯವಾಹಿನಿ, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳಬೇಕು ಎಂಬುದನ್ನು ಹಿರಿಯರು ಕೂಡ ಆಗಾಗ್ಗೆ ಹೇಳುತ್ತಿರುತ್ತಾರೆ. ಆದ್ರೆ ಹೆಚ್ಚಿನವರಿಗೆ ಬೆಳಗ್ಗೆ ಬೇಗ ಏಳುವುದೆಂದರೆಯೇ ( ಅಲರ್ಜಿ. ಅನೇಕರು ರಾತ್ರಿ ಲೇಟ್‌ ಆಗಿ ಮಲಗೋದು ಮಾತ್ರವಲ್ಲದೆ, ಬೆಳಗ್ಗೆ ಸೂರ್ಯ ನೆತ್ತಿ ಮೇಲೆ ಬಂದ್ರೂ ಎದ್ದೇಳುವುದಿಲ್ಲ. ಹೀಗೆ ಲೇಟ್‌ ಆಗಿ ಏಳುವ ಅಭ್ಯಾಸ ಒಳ್ಳೆಯದಲ್ಲ, ಸಾಧ್ಯವಾದಷ್ಟು ಬೆಳಗ್ಗೆ ಬೇಗನೆ ಏಳಬೇಕು. ಇದರಿಂದ ಇಡೀ ದಿನವೇ ಚೆನ್ನಾಗಿರುತ್ತದೆ, ಅದರಲ್ಲೂ ಬೆಳಗ್ಗೆ 5 ಗಂಟೆಗೆ ಏಳುವುದು ತುಂಬಾನೇ ಒಳ್ಳೆಯದು ಎಂದು ಹೇಳುವ ಮಾತೊಂದಿದೆ. ಹಾಗಿರುವಾಗ ಪ್ರತಿದಿನ ಮುಂಜಾನೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ, ಇದರಿಂದ ಲಭಿಸುವ ಪ್ರಯೋಜನವಾದರೂ ಏನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಲಭಿಸುವ ಪ್ರಯೋಜನ: ನಿದ್ರೆಯ ಗುಣಮಟ್ಟ: ಬೆಳಗ್ಗೆ ಬೇಗನೆ ಏಳುವುದರಿಂದ ಸಿರ್ಕಾಡಿಯನ್‌ ಲಯವು (ದಿನಚರ್ಯೆಯ ಲಯ) ಸಕ್ರಿಯಗೊಳ್ಳುತ್ತದೆ, ಇದು ರಾತ್ರಿಯಲ್ಲಿ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಈ ಎರಡೂ ಅಭ್ಯಾಸಗಳು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಒತ್ತಡ, ಆತಂಕ ನಿವಾರಣೆ: ಬೆಳಗ್ಗೆ ಬೇಗ ಏಳುವುದರಿಂದ ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ. ಇದು ನಿಮಗೆ ಶಾಂತವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ. ಬೆಳಗ್ಗೆ ಧ್ಯಾನ ಅಥವಾ ಮನಸ್ಸಿನ ನಿಯಂತ್ರಣದಂತಹ ಚಟುವಟಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಚೈತನ್ಯಶೀಲತೆ: ಬೆಳಗ್ಗೆ 5 ಗಂಟೆಗೆ ಏಳುವುದರಿಂದ ದೇಹವು ಚೈತನ್ಯಶೀಲತೆಯಿಂದ ಕೂಡಿರುತ್ತದೆ. ಪ್ರತಿದಿನ ಒಂದೇ ಸಮಯದಲ್ಲಿ ಏಳುವುದರಿಂದ ದೇಹದ ಸಿರ್ಕಾಡಿಯನ್‌ ಲಯ ಮರುಹೊಂದುತ್ತದೆ. ಇದು ದಿನವಿಡೀ ನಿಮ್ಮನ್ನು ಹೆಚ್ಚು ಚೈತನ್ಯಶೀಲವಾಗಿಡಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ: ಬೆಳಗ್ಗೆ ಬೇಗ ಏಳುವುದರಿಂದ ವ್ಯಾಯಾಮ ಮಾಡಲು ಮತ್ತು ಆರೋಗ್ಯಕರ ಉಪಹಾರ ಸೇವಿಸಲು ಸಾಕಷ್ಟು ಸಮಯ ಸಿಗುತ್ತದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ, ನೀವು ಬೇಗನೆ ಆಹಾರವನ್ನು ಸೇವಿಸುತ್ತೀರಿ, ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಮ್ಲೀಯತೆ, ಗ್ಯಾಸ್‌ನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆಯಾಗುತ್ತದೆ.

ಶಕ್ತಿ ಲಭಿಸುತ್ತದೆ: ಬೆಳಗ್ಗೆ ಬೇಗ ಏಳುವುದರಿಂದ ದೇಹ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಲು ಅವಕಾಶ ಸಿಗುತ್ತದೆ. ಬೆಳಗಿನ ಸೂರ್ಯನ ಬೆಳಕು ವಿಟಮಿನ್‌ ಡಿ ಯ ಉತ್ತಮ ಮೂಲವಾಗಿದ್ದು, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ ದಿನವಿಡೀ ತಾಜಾತನದಿಂದ ಕೂಡಿರುತ್ತದೆ.

Leave a Reply

Your email address will not be published. Required fields are marked *

error: Content is protected !!