ಉದಯವಾಹಿನಿ, ಇತ್ತೀಚೆಗೆ ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ. ಕ್ಯಾನ್ಸರ್ ಅಪಾಯವಿದೆ ಎಂಬ ವಿಡಿಯೋ ಒಂದು ಹಾರಿದಾಡಿತ್ತು. ಈ ಕುರಿತು ಮೊಟ್ಟೆ ಕ್ಯಾನ್ಸರ್‌ಕಾರಕವಲ್ಲ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಮೊಟ್ಟೆಯಲ್ಲಿ ಪ್ರಮುಖವಾಗಿ ಎರಡು ವಿಭಿನ್ನ ಭಾಗಗಳಿರುತ್ತವೆ. ಮೊಟ್ಟೆಯ ಬಿಳಿಭಾಗ ಮತ್ತು ಹಳದಿಭಾಗ ಎರಡೂ ವಿಭಿನ್ನ ರೀತಿಯಲ್ಲಿ ದೇಹಕ್ಕೆ ಪೋಷಣೆಗೆ ನೀಡುತ್ತವೆ. ಮೊಟ್ಟೆಯ ಈ ಎರಡು ಭಾಗಗಳಲ್ಲಿ ಯಾವುದು ಹೆಚ್ಚು ಪೌಷ್ಟಿಕ ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ಮೊಟ್ಟೆ ಸೇವಿಸುವವರು ನಿಜವಾಗಿಯೂ ಈ ಬಗ್ಗೆ ತಿಳಿಯುವುದು ಅತ್ಯಗತ್ಯ.
ಮೊಟ್ಟೆಯ ಹಳದಿ ಭಾಗದ ಪೌಷ್ಟಿಕ ಶಕ್ತಿ:
ಮೊಟ್ಟೆಯ ಹಳದಿಭಾಗವು ಅತ್ಯಂತ ಪೋಷಕಾಂಶ ಭರಿತ ಭಾಗವಾಗಿದೆ. ಇದು ಹೆಚ್ಚಿನ ಜೀವಸತ್ವ ಮತ್ತು ಖನಿಜಗಳನ್ನು ಹೊಂದಿದ್ದು, ಅಗತ್ಯ ಪೋಷಕಾಂಶಗಳ ಮೂಲವಾಗಿದೆ. ಮೊಟ್ಟೆಯ ಬಹುತೇಕ ಕೊಬ್ಬಿನಾಂಶ ಹಳದಿ ಭಾಗದಲ್ಲಿರುತ್ತದೆ.
ಮೊಟ್ಟೆಯ ಹಳದಿಭಾಗವು ವಿಟಮಿನ್ ಎ, ಡಿ, ಇ ಮತ್ತು ಕೆ ನಂತಹ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳಿಂದ ಸಮೃದ್ಧವಾಗಿದೆ. ಈ ಜೀವಸತ್ವಗಳು ದೃಷ್ಟಿ, ಮೂಳೆಯ ಬಲ, ರೋಗನಿರೋಧಕ ಶಕ್ತಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ. ಹಳದಿ ಭಾಗವು ವಿಟಮಿನ್ ಬಿ12, ಫೋಲೇಟ್ ಮತ್ತು ಕೋಲಿನ್ ಅನ್ನು ಸಹ ಒದಗಿಸುತ್ತದೆ. ಕೋಲಿನ್, ವಿಶೇಷವಾಗಿ ಮಿದುಳಿನ ಬೆಳವಣಿಗೆ, ನರಕೋಶದ ಕಾರ್ಯ ಮತ್ತು ಯಕೃತ್ತಿನ ಆರೋಗ್ಯಕ್ಕೆ ಸಹಾಯವಾಗಲಿದೆ.
ಕಬ್ಬಿಣ, ರಂಜಕ, ಸತು ಮತ್ತು ಸೆಲೆನಿಯಂನಂತಹ ಖನಿಜಗಳು ಸಹ ಹಳದಿ ಭಾಗದಲ್ಲಿ ಕಂಡುಬರುತ್ತವೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಕಬ್ಬಿಣಾಂಶವು ಕೆಂಪು ರಕ್ತ ಕಣಗಳ ರಚನೆಯನ್ನು ಬೆಂಬಲಿಸುತ್ತದೆ. ಅಲ್ಲದೇ ಆಯಾಸವನ್ನು ತಡೆಯಲು ಸಹಾಯ ಮಾಡುತ್ತದೆ. ಲೂಟಿನ್ ಮತ್ತು ಝಿಯಾಕ್ಸಾಂಥಿನ್‌ನಂತಹ ಕ್ಯಾರೊಟಿನಾಯ್ಡ್ಗಳನ್ನು ಸಹ ಹೊಂದಿದೆ. ಇವು ಕಣ್ಣಿನ ದೃಷ್ಟಿಗೆ ಪೂರಕವಾಗಿವೆ.
