ಉದಯವಾಹಿನಿ, ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ಗಂಟಲು ನೋವು ಸೇರಿದಂತೆ ವಿವಿಧ ಸಮಸ್ಯೆಗಳು ಕಾಡುತ್ತವೆ. ಶೀತ, ಒಣ ಗಾಳಿಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಸಮಸ್ಯೆಗಳಿಂದ ದೂರವಿರಲು ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಸಮತೋಲಿತ ಆಹಾರವನ್ನು ಸೇವಿಸುವುದು, ಬೆಚ್ಚಗಿರುವುದು, ಜನಸಂದಣಿಯನ್ನು ತಪ್ಪಿಸುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು ಅಗತ್ಯ.
ಹೆಚ್ಚಿನ ಜನರು ಕೆಮ್ಮು, ನೆಗಡಿ ಹಾಗೂ ಗಂಟಲು ನೋವನ್ನು ನಿವಾರಿಸಲು ವಿವಿಧ ಔಷಧಗಳನ್ನು ಪ್ರಯತ್ನಿಸುತ್ತಾರೆ. ಇವು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಯುರ್ವೇದ ತಜ್ಞರು ತಿಳಿಸಿರುವ ಪರಿಹಾರ ಕ್ರಮಗಳನ್ನು ಪ್ರಯತ್ನಿಸಬಹುದು. ಆಯುರ್ವೇದ ವೈದ್ಯೆ ಡಾ.ದೀಕ್ಷಾ ಭಾವಸರ್ ಸವಲಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಯುರ್ವೇದದಲ್ಲಿ ಲಭಿಸುವ ಕೆಲವು ಪರಿಹಾರ ಕ್ರಮಗಳ ಕುರಿತು ಹಂಚಿಕೊಂಡಿದ್ದಾರೆ.
ಮೊದಲು ಅರ್ಧ ಟೀಸ್ಪೂನ್ ಅರಿಶಿನವನ್ನು ತೆಗೆದುಕೊಳ್ಳಿ. ಬಳಿಕ ಅರ್ಧ ಟೀಸ್ಪೂನ್ ಒಣಗಿದ ಶುಂಠಿ ಪುಡಿ,
1 ಕರಿಮೆಣಸು ಅಥವಾ ಎರಡು ಚಿಟಿಕೆ ಕರಿಮೆಣಸಿನ ಪುಡಿ 1 ಟೀಸ್ಪೂನ್ ಶುದ್ಧ ಜೇನುತುಪ್ಪ ಹಾಕಿ. ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಪ್ರತಿದಿನಕ್ಕೆ ಎರಡರಿಂದ ಮೂರು ಬಾರಿ, ಊಟಕ್ಕಿಂತ ಒಂದು ಮೊದಲು ಅಥವಾ ನಂತರ ಬಳಿಕ ಸೇವಿಸಬೇಕು.

Leave a Reply

Your email address will not be published. Required fields are marked *

error: Content is protected !!