ಉದಯವಾಹಿನಿ, ದಾವಣಗೆರೆ: ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗಡೆಯವರು ಸರ್ಕಾರ ಮಾಡುವ ಕೆಲಸವನ್ನು ಕೂಡ ಅವರೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶಾಸಕ ಶಿವಗಂಗಾ ಬಸವರಾಜ್ ಕೊಂಡಾಡಿದ್ದಾರೆ. ಚನ್ನಗಿರಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಧರ್ಮಸ್ಥಳದ ಮೇಲೆ ಬಂದ ಈ ಅರೋಪವನ್ನು ನಂಬಲು ಅಸಾದ್ಯವಾಗಿದೆ. ಏಕೆ ಅರೋಪ ಮಾಡ್ತಾರೆ ಅಂತ ಗೊತ್ತಿಲ್ಲ. ಎಸ್ ಐಟಿ ತನಿಖೆ ನಡೆಯುತ್ತಿದೆ. ಇದುವರೆಗೂ ಯಾವುದೇ ಆಧಾರಗಳು ಸಿಕ್ಕಿಲ್ಲ ಎಂದಿದ್ದಾರೆ. ಶವಗಳು ಕೂಡ ಸಿಕ್ಕಿಲ್ಲ. ಇದರ ಹಿಂದೆ ಕಾಣದ ಕೈಗಳು ಪಿತೂರಿ ನಡೆಯುತ್ತಿದೆ. ಧರ್ಮಸ್ಥಳ ನಮ್ಮ ರಾಜ್ಯದ ಜನತೆಯ ಧಾರ್ಮಿಕ ಭಕ್ತ ಕೇಂದ್ರವಾಗಿದೆ. ಅದ್ದರಿಂದ ಅದರ ಮೇಲೆ ಪಿತೂರಿ ನಡೆಸುತ್ತಿದ್ದವರು ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
