ಉದಯವಾಹಿನಿ, ನವದೆಹಲಿ: ಟಿ20 ವಿಶ್ವಕಪ್ ಭಾರತ ತಂಡದ ತಕ್ಷಣದ ಆದ್ಯತೆಯಾಗಿದ್ದರೂ, ಕ್ರಿಕೆಟ್ ಅಭಿಮಾನಿಗಳ ಎಲ್ಲಾ ಕಣ್ಣುಗಳು 2027 ರ ಕ್ರಿಕೆಟ್ ವಿಶ್ವಕಪ್(2027 WC Squad) ಮೇಲೆ ಇವೆ. 2023ರಲ್ಲ ತವರಿನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಸೋಲಿಲ್ಲದೆ ಫೈನಲ್‌ ತನಕ ಸಾಗಿತ್ತು. ಆದರೆ ಫೈನಲ್‌ನಲ್ಲಿ ಸೋತು ನಿರಾಸೆ ಎದುರಿಸಿತ್ತು. ಇದೀಗ 2027ರಲ್ಲಿ ನಡೆಯುವ ಈ ಮೆಗಾ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ(Virat Kohli) ಮತ್ತು ರೋಹಿತ್‌ ಶರ್ಮ( Rohit Sharma) ಆಡುವುದು ಅನುಮಾನ. ಉಭಯ ಆಟಗಾರರು ವಿಶ್ವಕಪ್‌ ಟೂರ್ನಿಗೆ ಮುನ್ನವೇ ನಿವೃತ್ತಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶುಭಮನ್‌ ಗಿಲ್‌(Shubman Gill) ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ರೋಹಿತ್ ಮತ್ತು ವಿರಾಟ್ ಭಾರತದ ಏಕದಿನ ತಂಡದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಈ ಜೋಡಿ 15 ವರ್ಷಗಳಿಗೂ ಹೆಚ್ಚು ಕಾಲದಿಂದ ತಂಡದಲ್ಲಿ ಸ್ಥಿರ ಸದಸ್ಯರಾಗಿದ್ದಾರೆ. ಮತ್ತು ಇಬ್ಬರೂ ಈ ಸ್ವರೂಪದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ.

ಕೆಲ ವರದಿಗಳ ಪ್ರಕಾರ ಮೂರನೇ ಸ್ಥಾನದಲ್ಲಿ ಭಾರತ ತಂಡವು ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್ ಮತ್ತು ತಿಲಕ್ ವರ್ಮಾ ಅವರಂತಹ ಆಯ್ಕೆಗಳನ್ನು ಹೊಂದಿದೆ. ಶ್ರೇಯಸ್ ಅಯ್ಯರ್ ತಂಡದ ಪ್ರಮುಖ ಭಾಗವಾಗಿ ಉಳಿಯಲಿದ್ದಾರೆ. ಆದರೆ ಕೆಎಲ್ ರಾಹುಲ್ ಏಕದಿನ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನಮಾನವನ್ನು ಗಳಿಸಿದ್ದಾರೆ.

ಆಲ್‌ರೌಂಡರ್‌ಗಳಲ್ಲಿ, ಹಾರ್ದಿಕ್ ಪಾಂಡ್ಯ ತಂಡದ ಅತ್ಯಂತ ಮೌಲ್ಯಯುತ ಆಟಗಾರನಾಗಲಿದ್ದಾರೆ. ಮೆನ್ ಇನ್ ಬ್ಲೂ ತಂಡವು ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಲ್ಲಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಗಿ ಬರಲಿದೆ. ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಂಡದ ಮೊದಲ ಆಯ್ಕೆಯ ಸ್ಪಿನ್ನರ್‌ಗಳಾಗಲಿದ್ದಾರೆ. ಆದರೆ 15 ಜನರ ತಂಡದಲ್ಲಿ ಇಬ್ಬರನ್ನೂ ಸೇರಿಸಿಕೊಳ್ಳಲು ತಂಡವು ಕಷ್ಟಪಡಬಹುದು. ಫಿಟ್‌ನೆಸ್‌ ಕಳೆದುಕೊಂಡು ಆಗಾಗ ಗಾಯಕ್ಕೆ ತುತ್ತಾಗುತ್ತಿರುವ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!