ಉದಯವಾಹಿನಿ, ಜೈಪುರ್: DRDO ವಿಜ್ಞಾನಿಗಳ ಮೇಲೆ ನಿಗಾ ಇಟ್ಟು, ಅವರ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಜೈಸಲ್ಮೇರ್‌ನಲ್ಲಿರುವ ಡಿಆರ್‌ಡಿಒದ ಅತ್ಯಂತ ಅತಿಥಿ ಗೃಹದ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅತಿಥಿ ಗೃಹದಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಉತ್ತರಾಖಂಡ ಮೂಲದ ಮಹೇಂದ್ರ ಪ್ರಸಾದ್ (32) ಎಂದು ಗುರುತಿಸಲಾಗಿದೆ. ಈತ ಉನ್ನತ ವಿಜ್ಞಾನಿಗಳ ಇಮೇಲ್‌ಗಳು ಮತ್ತು ದೂರವಾಣಿ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದ. ಅವನ್ನೆಲ್ಲ ಪಾಕಿಸ್ತಾನಕ್ಕೆ ಹಂಚಿದ್ದಾನೆ ಎಂದು ಆರೋಪಿಸಲಾಗಿದೆ.
ಪತ್ರಗಳಲ್ಲಿರುವ ಇಮೇಲ್ ಹಾಗೂ ಮೊಬೈಲ್ ನಂಬರ್‌ಗಳನ್ನು ಕಲೆಹಾಕಿ ಪಾಕ್‌ನ ಏಜೆಂಟ್‌ಗೆ ಕಳುಹಿಸಿದ್ದಾನೆ. ಅಲ್ಲದೇ ಪಾಕಿಸ್ತಾನದಲ್ಲಿ ಆರೋಪಿಯ ನಿರ್ವಾಹಕ ʻಕರ್ನಲ್ʼ ಆಗಿದ್ದು, ಅವನು ವಾಟ್ಸಾಪ್ ಮೂಲಕ ಸಂವಹನ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
