ಉದಯವಾಹಿನಿ,ನವದೆಹಲಿ: ಕಾಲಿನ ಗಾಯವನ್ನು ಲೆಕ್ಕಿಸದೆ ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕ್ರಿಕೆಟಿಗ ರಿಷಭ್ ಪಂತ್ ಇದೀಗ ಕಾಲಿಗೆ ಬ್ಯಾಂಡೆಜ್ ಸುತ್ತಿಕೊಂಡೆ ಪಿಜ್ಜಾ ತಯಾರಿಸಿದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ಪಂತ್ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
“ಇವತ್ತು ನಾನು ನಿಮಗೆ ಪಿಜ್ಜಾ ಮಾಡುವುದು ಹೇಗೆಂದು ತೋರಿಸುತ್ತೇನೆ. ಹುಡುಗರೇ, ನನ್ನ ಮಾತು ಕೇಳಿ. ನಾನು ಸಸ್ಯಾಹಾರಿ ಪಿಜ್ಜಾ ಮಾಡುತ್ತೇನೆ ಅಂತ ಅನಿಸುತ್ತಿದೆ. ನನಗೆ ಸಸ್ಯಾಹಾರ ತುಂಬಾ ಇಷ್ಟ. ಹೌದು, ಟ್ರಫಲ್(ಬಾಣಸಿಗ) ಜತೆ. ಬಿಸಿಯಾಗಿದೆ! ಪಿಜ್ಜಾ ಸಿದ್ಧವಾಗುತ್ತಿದೆ ಮತ್ತು ನಾನು ಅದಕ್ಕಾಗಿ ಕಾಯುತ್ತೇನೆ. ಕಾಲು ಮುರಿದುಕೊಂಡರೆ ನಾನು ಮಾಡಬಹುದಾದ ಏಕೈಕ ಕೆಲಸ ಅದು. ಪಿಜ್ಜಾ ಬೇಯಿಸುವುದು. ಅಮ್ಮ ‘ಘರ್ ಪೆ ತೋ ಕುಚ್ ಬನಾಯಾ ನಹಿ ಹೈ, ಯಹ ಪಿಜ್ಜಾ ಬನಾ ರಹಾ ಹೈ (ನಾನು ಅಡುಗೆ ಮಾಡುತ್ತಿರುವುದನ್ನು ನೋಡಿ ನನ್ನ ತಾಯಿ, ಮನೆಯಲ್ಲಿ ಏನೂ ಬೇಯಿಸಿಲ್ಲ ಆದರೆ ಅಲ್ಲಿ ಅವನು ಪಿಜ್ಜಾ ಬೇಯಿಸುತ್ತಿದ್ದಾನೆ!) ಎಂದು ಯೋಚಿಸುತ್ತಿರಬೇಕು” ಎಂದು ಪಂತ್ ಹೇಳಿದರು. ಪಂತ್ ಮಾತು ಕೇಳಿ ಬಾಣಸಿಗ ಜೋರಾಗಿ ನಕ್ಕಿದ್ದಾರೆ.
