ಉದಯವಾಹಿನಿ, ಕೋಲ್ಕತ್ತಾ: ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟು ಬಿಡ್ತೀನಿ ಎಂದು ಬಿಜೆಪಿ ಶಾಸಕ ಶಂಕರ್ ಘೋಷ್ (Shankar Ghosh) ಅವರಿಗೆ ಟಿಎಂಸಿ ನಾಯಕ ಅಬ್ದುರ್‌ ರಹೀಮ್ ಬಕ್ಷಿ ಬೆದರಿಕೆ ಹಾಕಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾಗಿರುವ ಅಬ್ದುರ್ ಭಾಗಿಯಾಗಿದ್ದರು. ಈ ವೇಳೆ ದೇಶದ ಇತರ ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ವಿರುದ್ಧ ನಡೆದ ದೌರ್ಜನ್ಯವನ್ನು ವಿರೋಧಿಸಿ ಮಾತನಾಡುತ್ತಿದ್ದಾಗ ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರು ಉಲ್ಲೇಖಿಸದೇ ಬೆದರಿಕೆ ಹಾಕಿ, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶಂಕರ್ ಘೋಷ್ ಅವರು ರಾಜ್ಯದಿಂದ ವಲಸೆ ಬಂದ ಕಾರ್ಮಿಕರನ್ನು ರೋಹಿಂಗ್ಯರು ಅಥವಾ ಬಾಂಗ್ಲಾದೇಶಿಗಳು ಎಂದಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಹೊರಗೆ ಕೆಲಸ ಮಾಡುವ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ. ಅವರು ರೋಹಿಂಗ್ಯರು. ಆದರೆ ಅವರನ್ನು ಬಾಂಗ್ಲಾದೇಶಿಯರು ಎಂದು ನಾಚಿಕೆಯಿಲ್ಲದೆ ಹೇಳಿದ್ದಾನೆ. ಈ ಕುರಿತು ಈ ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನೀವು ಈ ರೀತಿಯಾಗಿ ಮತ್ತೆ ಹೇಳುವುದನ್ನು ನಾನು ಕೇಳಿದರೆ ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟು ಬಿಡ್ತೀನಿ ಎಂದಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!