ಉದಯವಾಹಿನಿ, ಪಟನಾ: ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವಾಗ ಮಹಿಳಾ ಆಯುಷ್ ವೈದ್ಯೆಯೊಬ್ಬರ್ ಹಿಜಾಬ್ ಅನ್ನು ಎಳೆದಿದ್ದಾರೆ. ಸೋಮವಾರದಂದು ಪಟನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಇದಾಗಿದೆ. ನೇಮಕಾತಿಗೊಂಡವರಲ್ಲಿ ಒಬ್ಬರಾದ ಮಹಿಳೆ ನುಸ್ರತ್ ಪರ್ವೀನ್ ಅವರ ಪತ್ರವನ್ನು ಸ್ವೀಕರಿಸಲು ಮುಂದೆ ಬಂದರು. ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ನಂತರ, ಸಿಎಂ ನಿತೀಶ್ ಕುಮಾರ್ ಮಹಿಳೆಯ ಹಿಜಾಬ್ ಕಡೆಗೆ ಸನ್ನೆ ಮಾಡಿದ್ದಾರೆ. ಬಳಿಕ ಸ್ವತಃ ತಾವೇ ಅದನ್ನು ಕೈಯಿಂದ ಎಳೆದರು. ಈ ಘಟನೆಯಿಂದ ಮಹಿಳೆಗೆ ಮುಜುಗರವಾಗಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವರು ನಕ್ಕಿದ್ದಾರೆ. ಇದರಿಂದ ಮಹಿಳೆಯು ಸ್ವಲ್ಪ ಸಮಯದವರೆಗೆ ಅಸಮಾಧಾನಗೊಂಡಂತೆ ಕಂಡುಬಂದರು. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ರಾಷ್ಟ್ರೀಯ ಜನತಾ ದಳ ಪಕ್ಷವು ನಿತೀಶ್ ಕುಮಾರ್ ಅವರ ಈ ನಡೆಯನ್ನು ಟೀಕಿಸಿದೆ. ನಿತೀಶ್ ಅವರಿಗೆ ಏನಾಯಿತು? ಅವರ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆಯೇ ಅಥವಾ ನಿತೀಶ್ ಈಗ ಸಂಘಿಯಾಗಿದ್ದಾರೆಯೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಕೂಡ ಸಿಎಂ ನಿತೀಶ್ ಅವರ ಈ ನಡೆಗೆ ಕಿಡಿಕಾರಿದೆ. ಇದೊಂದು ಅಸಹ್ಯಕರ ಕೃತ್ಯ ಎಂದ ಕಾಂಗ್ರೆಸ್, ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುವಂತೆ ಆಗ್ರಹಿಸಿದೆ. ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಆ ರೀತೀ ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

Leave a Reply

Your email address will not be published. Required fields are marked *

error: Content is protected !!