ಉದಯವಾಹಿನಿ, ಬ್ರಿಟನ್: ರಾಣಿ ಎಲಿಜಬೆತ್ ಅವರ ಮೂರನೇ ವರ್ಷದ ಪುಣ್ಯತಿಥಿಯಾದ ಸೋಮವಾರ ತೀವ್ರ ಅಸ್ವಸ್ಥ ಮಕ್ಕಳಿಗಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಿನ್ಸ್ ಹ್ಯಾರಿ (Prince Harry) ಬ್ರಿಟನ್ ಗೆ (Britain) ಬರಲಿದ್ದು, ಈ ವೇಳೆ ಅವರು ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಬಹುದು ಎನ್ನಲಾಗಿದೆ. ಇವರಿಬ್ಬರ ಭೇಟಿಯು ಕುಟುಂಬದದಲ್ಲಿರುವ ಭಿನ್ನಾಭಿಪ್ರಾಯ ದೂರ ಮಾಡುತ್ತದೆ ಎನ್ನುವ ನಿರೀಕ್ಷೆಗಳು ಹೆಚ್ಚಾದಂತಿದೆ. 76 ವರ್ಷದ ಕಿಂಗ್ ಚಾರ್ಲ್ಸ್ ಮತ್ತು ಅವರ ಮಗ ಹ್ಯಾರಿ ಭೇಟಿಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಕುಟುಂಬದಲ್ಲಿನ ಭಿನ್ನಾಭಿಪ್ರಾಯ ದೂರ ಮಾಡಲು 20 ತಿಂಗಳ ಬಳಿಕ ತಾತ್ಕಾಲಿಕ ಹೆಜ್ಜೆಯಾಗಿ ಪ್ರಿನ್ಸ್ ಹ್ಯಾರಿ ಬ್ರಿಟನ್‌ಗೆ ಮರಳುತ್ತಿದ್ದಾರೆ. ಹ್ಯಾರಿ ಅವರು ತಮ್ಮ ಅಜ್ಜಿ ರಾಣಿ ಎಲಿಜಬೆತ್ ಅವರ ಮೂರನೇ ವರ್ಷದ ಪುಣ್ಯತಿಥಿಯ ಅಂಗವಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮವಾದ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಕಿಂಗ್ ಚಾರ್ಲ್ಸ್ ಮತ್ತು ಅವರ ಮಗ ಹ್ಯಾರಿ ಪರಸ್ಪರ ಭೇಟಿಯಾಗಿ ಕುಟುಂಬದಲ್ಲಿರುವ ಉನ್ನತ ಮಟ್ಟದ ಬಿರುಕುಗಳನ್ನು ಸರಿಪಡಿಸಬಹುದು ಎನ್ನಲಾಗುತ್ತಿದೆ. ಹ್ಯಾರಿ ಬ್ರಿಟನ್ ಗೆ ಬಂದಿರುವುದರಿಂದ ಅವರು ತಮ್ಮ ತಂದೆಯನ್ನು ಭೇಟಿಯಾಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ ಎಂದು ಲಂಡನ್‌ನಲ್ಲಿರುವ ರಾಜಮನೆತನದ ವರದಿ ಮಾಡುವ ಸೈಮನ್ ಪೆರ್ರಿ ತಿಳಿಸಿದ್ದಾರೆ.
ಬಕಿಂಗ್ ಹ್ಯಾಮ್ ಅರಮನೆಯು ಖಾಸಗಿ ಕುಟುಂಬದ ವಿಷಯಗಳನ್ನು ಎಂದಿಗೂ ಚರ್ಚಿಸುವುದಿಲ್ಲ ಎಂಡಿರುವ ಹ್ಯಾರಿಯ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಕಿಂಗ್ ಹ್ಯಾಮ್ ಅರಮನೆಯಲ್ಲಿರುವ ಕಿಂಗ್ ಚಾರ್ಲ್ಸ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹ್ಯಾರಿ ತನ್ನ ತಂದೆಯನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದರು. 2020ರಲ್ಲಿ ಅವರು ರಾಜಮನೆತನದ ಕರ್ತವ್ಯಗಳನ್ನು ತೊರೆದು ಕ್ಯಾಲಿಫೋರ್ನಿಯಾಗೆ ತೆರಳಿದ್ದರು.
ಸಂದರ್ಶನಗಳಲ್ಲಿ ಹ್ಯಾರಿ ತನ್ನ ತಂದೆ ಮತ್ತು ಹಿರಿಯ ಸಹೋದರ, ಉತ್ತರಾಧಿಕಾರಿ ಪ್ರಿನ್ಸ್ ವಿಲಿಯಂ ಅನ್ನು ಟೀಕಿಸಿದ್ದರು. ತನ್ನ ಭದ್ರತೆಯ ಕುರಿತು ಬ್ರಿಟಿಷ್ ಸರ್ಕಾರದೊಂದಿಗಿನ ಕಾನೂನು ಹೋರಾಟದಲ್ಲಿ ಸೋತ ಬಳಿಕ ಅವರು ತಾನು ಹೊಂದಾಣಿಕೆಯನ್ನು ಬಯಸುತ್ತೇನೆ ಎಂದು ತಿಳಿಸಿದ್ದರು.
