ಉದಯವಾಹಿನಿ, ಪ್ಯಾರಿಸ್: ಕೆಲಸದ ವಾತಾವರಣವನ್ನು ಉತ್ತಮಪಡಿಸುವಂತೆ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಲೂವ್ರಾ ಮ್ಯೂಸಿಯಂನ ಸಿಬ್ಬಂದಿ ಮುಷ್ಕರ ನಡೆಸಲು ಸಭೆ ನಡೆಸಿದ್ದಾರೆ. ನಡೆದ ಸಭೆಯಲ್ಲಿ 400 ಕಾರ್ಮಿಕರು ಮತ ಚಲಾಯಿಸಿ, ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂದು ಸಿಎಫ್‌ಡಿಟಿ ಸಂಘಟನೆ ತಿಳಿಸಿದೆ.ಕಾರ್ಮಿಕ ಸಂಘಟನೆ ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಕಳೆದ ವಾರ ಈ ಕುರಿತು ಮಾತುಕತೆ ನಡೆದಿತ್ತು. ಇದಾದ ಬಳಿಕ ಮುಷ್ಕರಕ್ಕೆ ಮತ ಚಲಾಯಿಸಲಾಗಿದೆ. ಮುಷ್ಕರದಿಂದ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಆಡಚಣೆಯಾಗಿದೆ ಎಂದು ಸಿಎಫ್‌ಡಿಟಿ ಸಂಘಟನೆ ತಿಳಿಸಿದೆ.
