
ಉದಯವಾಹಿನಿ, ಮುಂಬೈ: ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಪ್ನಾ ಗಿಲ್ ತಮ್ಮ ವಿರುದ್ಧ ಸಲ್ಲಿಸಿದ್ದ ದೂರಿಗೆ ಉತ್ತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ಕ್ರಿಕೆಟಿಗ ಪೃಥ್ವಿ ಶಾಗೆ ಮುಂಬೈ ಕೋರ್ಟ್ 100 ರೂ. ದಂಡ ವಿಧಿಸಿದೆ. ದೂರಿಗೆ ಉತ್ತರಿಸುವಂತೆ ಕೋರ್ಟ್ ಹೇಳಿದ್ದರೂ ಉತ್ತರಿಸದ ಹಿನ್ನೆಲೆ 100 ರೂ. ದಂಡ ವಿಧಿಸಿದ್ದು, ಅರ್ಜಿ ವಿಚಾರಣೆಯನ್ನ ಡಿಸೆಂಬರ್ 16ಕ್ಕೆ ಮುಂದೂಡಿದೆ.
2024ರ ಏಪ್ರಿಲ್‌ನಲ್ಲಿ ದಿನೋಶಿ ಸೆಷನ್ಸ್ ಕೋರ್ಟ್‌ನಲ್ಲಿ ಹಿಂದಿನ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ಪರಿಷ್ಕರಿಸುವಂತೆ ಇನ್‌ಫ್ಲುಯೆನ್ಸರ್ ಸಪ್ನಾ ಗಿಲ್ ಅರ್ಜಿ ಸಲ್ಲಿಸಿದ್ದರು. ಆ ನಂತರ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿ ಪ್ರಾಥಮಿಕ ತನಿಖೆಗೆ ಆದೇಶಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಪೃಥ್ವಿ ಶಾಕೆ ಸೂಚಿಸಿತ್ತು. ಆದ್ರೆ ಪೃಥ್ವಿ ಶಾ ಉತ್ತರ ನೀಡಲು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ 100 ರೂ. ದಂಡ ವಿಧಿಸಿರುವ ಕೋರ್ಟ್, ಉತ್ತರ ನೀಡಲು ಮತ್ತೊಂದು ಅವಕಾಶ ನೀಡಿ, ಡಿ.16ಕ್ಕೆ ವಿಚಾರಣೆ ಮುಂದೂಡಿದೆ.
ಪೃಥ್ವಿ ಶಾ ನ್ಯಾಯಾಂಗದ ಪ್ರಕ್ರಿಯೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಲವು ಬಾರಿ ಸಮನ್ಸ್ ನೀಡಿದ್ದರೂ ಪ್ರಕರಣವನ್ನು ಉತ್ತರ ಕೊಟ್ಟಿಲ್ಲ. ಹೀಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ವಹಿಸಬೇಕು ಅನ್ನೋದು ಸಪ್ನಾ ಪರ ವಕೀಲ ಅಲಿ ಕಾಶಿಫ್ ಖಾನ್ ಅವರ ವಾದವಾಗಿದೆ.
