ಉದಯವಾಹಿನಿ, ನವದೆಹಲಿ: ಭಾರತದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಹಾಂಗ್ ಕಾಂಗ್ ಓಪನ್ ಸೂಪರ್ 500 ಟೂರ್ನಿಯಲ್ಲಿ(Hong Kong Open 2025) ಸೋತು ತಮ್ಮ ಅಭಿಯಾನ ಮುಗಿಸಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಶ್ರೇಯಾಂಕರಹಿತ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ 21-15, 16-21, 19-21 ಅಂತರದಿಂದ ಸೋಲು ಕಂಡರು.

ಕಳೆದ ತಿಂಗಳು ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್ ತಲುಪಿದ್ದ ಸಿಂಧು, ಮೇಲೆ ಈ ಟೂರ್ನಿಯಲ್ಲಿ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ಸೋತು ನಿರೀಕ್ಷೆಯನ್ನು ಹುಸಿಯಾಗಿದ್ದಾರೆ. 25 ವರ್ಷದ ಆಟಗಾರ್ತಿ ಡೇನ್ ವಿರುದ್ಧ ಸಿಂಧುಗೆ ಎದುರಾದ ಮೊದಲ ಸೋಲು ಇದಾಗಿದೆ. ಹಿಂದಿನ 5 ಮುಖಾಮುಖಿಯಲ್ಲಿ ಸಿಂಧು ಮೇಲುಗೈ ಸಾಧಿಸಿದ್ದರು. ಸಿಂಧು ಮಾತ್ರವಲ್ಲದೆ ಅನುಪಮಾ ಉಪಾಧ್ಯಾಯ ಕೂಡ ಸೋತು ನಿರ್ಗಮಿಸಿದರು.

ಪ್ರಣಯ್ ಪ್ರಿ-ಕ್ವಾರ್ಟರ್‌ಗೆ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 34 ನೇ ಶ್ರೇಯಾಂಕಿತ, ಎಚ್.ಎಸ್. ಪ್ರಣಯ್ ಅವರು ವಿಶ್ವದ 14 ನೇ ಶ್ರೇಯಾಂಕಿತ ಚೀನಾದ ಲು ಗುವಾಂಗ್ ಜು ಅವರನ್ನು 44 ನಿಮಿಷಗಳ ಹೋರಾಟದಲ್ಲಿ 21-17, 21-14 ನೇರ ಗೇಮ್‌ಗಳ ಅಂತರದಲ್ಲಿ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದರು. ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಲಕ್ಷ್ಯ ಸೇನ್ ಕೂಡ 22-20, 16-21, 21-15 ಅಂತರದಲ್ಲಿ ಕಠಿಣ ಗೆಲುವು ಸಾಧಿಸಿದರು. ಕಿರಣ್ ಜಾರ್ಜ್ ಸಿಂಗಾಪುರದ ಉನ್ನತ ಶ್ರೇಯಾಂಕಿತ ಜಿಯಾ ಹೆಂಗ್ ಜೇಸನ್ ತೆಹ್ ಅವರನ್ನು 21-16, 21-11 ಅಂತರದಲ್ಲಿ ಸೋಲಿಸಿದರು.

Leave a Reply

Your email address will not be published. Required fields are marked *

error: Content is protected !!