ಉದಯವಾಹಿನಿ, ನವದೆಹಲಿ: ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಐವರು ಐಸಿಸ್ ಉಗ್ರರ ಗ್ಯಾಂಗ್‌ನ ಬಗ್ಗೆ ರಣರೋಚಕ ರಹಸ್ಯಗಳು ಬಯಲಾಗಿವೆ. ʻಖಿಲಾಫತ್ʼ ಮಾಡಲು ಹೊಂಚುಹಾಕಿದ್ದ ಗ್ಯಾಂಗ್ ಬಲಪಂಥೀಯ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಚಾಟಿಂಗ್ ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ಈ ಗ್ಯಾಂಗ್ ಪಾಕ್‌ನಿಂದ ನಿರ್ವಹಿಸಲ್ಪಡುತ್ತಿತ್ತು. ಗುಂಪಿನಲ್ಲಿ 40 ಸದಸ್ಯರು ಇದ್ದರೂ ಕೇವಲ ಐವರಿಗೆ ಮಾತ್ರ ಉಗ್ರ ಚಟುವಟಿಕೆಗಳ ಬಗ್ಗೆ ತಿಳಿದಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ಶಂಕಿತರು ಬಲಪಂಥೀಯ ನಾಯಕರನ್ನೇ ಗುರಿಯಾಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಕುರಿತು ಸಿಗ್ನಲ್ ಆಪ್‌ನಲ್ಲಿ ಪಾಕ್ ಮೂಲದವರೊಂದಿಗೆ ನಡೆಸಿದ ಚಾಟ್‌ಗಳು ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಲ್ಲದೇ ಶಂಕಿತ ಉಗ್ರರ ಗ್ಯಾಂಗ್ ನಿರಂತರವಾಗಿ ಪಾಕ್ ಮೂಲದವರ ಜೊತೆಗೆ ಸಂಪರ್ಕದಲ್ಲಿರುತ್ತಿತ್ತು. ಸಿಗ್ನಲ್ ಆಪ್ (Signal App) ಮೂಲಕ ಮುಂದಿನ ಚಟುವಟಿಕೆಗಳ ಬಗ್ಗೆ ಸಂವಹನ ನಡೆಸುತ್ತಿತ್ತು. ಜೊತೆಗೆ ಭಾರತದಲ್ಲಿ ಎಲ್ಲೆಲ್ಲಿ ಕೆಮಿಕಲ್ ಬಾಂಬ್ ಸ್ಫೋಟಿಸಬೇಕು ಅನ್ನೋ ಬಗ್ಗೆಯೂ ಚರ್ಚಿಸಿದ್ದರು. ಆತ್ಮಹತ್ಯಾ ಬಾಂಬರ್‌ಗಳನ್ನು ಸಿದ್ಧಪಡಿಸಿದ್ದರು ಅನ್ನೋದು ವರದಿಗಳಿಂದ ತಿಳಿದುಬಂದಿದೆ.
