ಉದಯವಾಹಿನಿ, ಭೋಪಾಲ್‌: ಮಂದ್ಸೌರ್‌ನಲ್ಲಿ ಗಾಂಧಿ ಸಾಗರ್ ಫಾರೆಸ್ಟ್ ರಿಟ್ರೀಟ್‌ನಲ್ಲಿ ಕಾರ್ಯಕ್ರಮದ ಸಮಯದಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರನ್ನು ಹೊತ್ತೊಯ್ಯುತ್ತಿದ್ದ ಬಿಸಿ ಗಾಳಿಯ ಬಲೂನ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ . ಅದೃಷ್ಟವಶಾತ್, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಮುಖ್ಯಮಂತ್ರಿ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಘಟನೆಯ ವಿಡಿಯೋವೊಂದು ಹೊರಬಿದ್ದಿದ್ದು, ಸಿಎಂ ಮೋಹನ್ ಯಾದವ್ ಅವರಿದ್ದ ಬಲೂನಿಗೆ ಬೆಂಕಿ ಬಿದ್ದಿರುವುದನ್ನು ನೋಡಬಹುದಾಗಿದೆ.
ನಾಲ್ಕನೇ ಆವೃತ್ತಿಯ ಗಾಂಧಿಸಾಗರ್ ಉತ್ಸವವನ್ನು ಉದ್ಘಾಟಿಸಿದ ಒಂದು ದಿನದ ನಂತರ, ಮಂದ್ಸೌರ್ ಸಂಸದ ಸುಧೀರ್ ಗುಪ್ತಾ ಅವರೊಂದಿಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಿಎಂ ಬಲೂನ್ ಹತ್ತಿದರು. ವರದಿಗಳ ಪ್ರಕಾರ, ಗಂಟೆಗೆ 20 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿಯ ಕಾರಣ ಬಲೂನ್ ಹಾರಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ, ಬಲೂನಿನ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು, ಅದನ್ನು ಅಲ್ಲಿದ್ದ ನೌಕರರು ನಂದಿಸಿದರು ಮತ್ತು ಸಿಎಂ ಯಾದವ್ ಸವಾರಿ ಮಾಡುತ್ತಿದ್ದ ಟ್ರಾಲಿಯನ್ನು ಭದ್ರತಾ ಸಿಬ್ಬಂದಿ ಕೆಳಗಿಳಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಮುಖ್ಯಮಂತ್ರಿ ಯಾದವ್‌ ಬಲೂನಿನಿಂದ ಕೆಳಗಿಳಿದ ಬಳಿಕ ನಾನು ಸುರಕ್ಷಿತವಾಗಿದ್ದೇನೆ ಎಂದು ಮಾತನಾಡಿದ್ದಾರೆ. ಗಾಂಧಿ ಸಾಗರವು ಸಾಗರದಂತೆ, ಇದು ವನ್ಯಜೀವಿಗಳು ಮತ್ತು ನೈಸರ್ಗಿಕ ಪರಂಪರೆಯನ್ನು ಹೊಂದಿದೆ. ನಾನು ಇಲ್ಲಿ ರಾತ್ರಿಯಿಡೀ ಉಳಿದು ನೀರಿನ ಚಟುವಟಿಕೆಗಳನ್ನು ಆನಂದಿಸಿದೆ. ಇದು ಪ್ರವಾಸಿಗರಿಗೆ ಸ್ವರ್ಗ. ಇಲ್ಲಿ ಎಲ್ಲವೂ ಇರುವಾಗ ವಿದೇಶಕ್ಕೆ ಏಕೆ ಹೋಗಬೇಕು?” ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!