ಉದಯವಾಹಿನಿ, ಕಿಂಗ್ಡಮ್’ ಸಿನಿಮಾದ ಸೋಲಿನ ನಂತರ ರಿಲ್ಯಾಕ್ಸ್‌ ಆಗಲು ತೆರಳಿದ್ದಾರೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಇತ್ತೀಚೆಗೆ ತಮ್ಮ ಸ್ನೇಹಿತರ ಜೊತೆ ಸೇರಿ ಕೌಯಿ ದ್ವೀಪಕ್ಕೆ ಭೇಟಿ ನೀಡಿದ ಕ್ಷಣಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ಸಿನಿಮಾ ವಿಜಯ್ ದೇವರ ಕೊಂಡಗೆ ಸೋಲಿನ ದರ್ಶನ ಮಾಡಿಸಿದೆ.
ವಿಜಯ್ ದೇವರಕೊಂಡ ಮುಂದಿನ ಸಿನಿಮಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮುಂಚೆ ಕೌಯಿ ದ್ವೀಪಕ್ಕೆ ಭೇಟಿ ನೀಡಿದ್ದಾರೆ. ಈ ದ್ವೀಪದ ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಈ ವೇಳೆ ಸ್ನೇಹಿತರ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಲ್ಲಾ ಕ್ಷಣಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ ವಿಜಯ್ ದೇವರಕೊಂಡ. ವಿಜಯ್ ದೇವರಕೊಂಡ ಸದ್ಯ ಸಿನಿಮಾದ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಸಮಯವನ್ನ ಸ್ನೇಹಿತರ ಜೊತೆ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕಳೆದ ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಜೊತೆ ಕ್ಯಾಪ್ಷನ್ ನಲ್ಲಿ ಪರಿಪೂರ್ಣ ಜೀವನ ಅಂತ ತಮ್ಮ ಕನಸು ನನಸಾದ ಬಗೆಯನ್ನ ವ್ಯಕ್ತಪಡಿಸಿದ್ದಾರೆ. ವಿಜಯ್ ದೇವರಕೊಂಡ ಹಂಚಿಕೊಂಡ ವಿಡಿಯೋ ಹಾಗೂ ಫೋಟೋಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!