ಉದಯವಾಹಿನಿ,ದುಬೈ: ಟಿ-20 ಏಷ್ಯಾ ಕಪ್‌ 2025 ಪಂದ್ಯಾವಳಿಯ ಅತ್ಯಂತ ರೋಚಕ ಕದನವಾದ ಭಾರತ-ಪಾಕಿಸ್ತಾನ ಪಂದ್ಯಕ್ಕೆ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಸಜ್ಜಾಗಿದೆ. ಇಂದು ರಾತ್ರಿ 8 ಗಂಟೆಗೆ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಫೆವರಿಟ್‌ ತಂಡವಾಗಿ ಹೊರಹೊಮ್ಮಿದೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಆಘಾತವಾಗಿದೆ.
ಬದ್ಧವೈರಿ ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಶುಭಮನ್‌ ಗಿಲ್‌ ಗಾಯಗೊಂಡಿದ್ದಾರೆ. ಭಾರತ – ಪಾಕ್‌ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದ ವೇಳೆ ಕೈಗೆ ಬಾಲ್‌ ಬಡಿದು, ಇದರಿಂದ ವಿಪರೀತ ನೋವು ಕಾಣಿಸಿಕೊಂಡಿದೆ. ಬಳಿಕ ಅಭ್ಯಾಸ ಸ್ಥಗಿತಗೊಳಿಸಿದ್ದು, ಫಿಸಿಯೋಥೆರಪಿಸ್ಟ್‌ ತಪಾಸಣೆ ನಡೆಸಿದ್ದಾರೆ. ಇದಾದ ಬಳಿಕ ಮತ್ತೆ ನೆಟ್ಸ್‌ನಲ್ಲಿ ಗಿಲ್‌ ಬೆವರಿಳಿಸಿದ್ದಾರೆ.
ಗಿಲ್‌ ಇಂಜುರಿಗೊಂಡ ಬಳಿಕ ನಾಯಕ ಸೂರ್ಯಕುಮಾರ್‌ ಯಾದವ್‌ ಮುಖ್ಯಕೋಚ್‌ ಗಂಭೀರ್‌ ಅವರೊಂದಿಗೆ ಮಾತನಾಡಿದ್ದಾರೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಗಿಲ್‌ ಔಟಾದ್ರೆ, ಸಂಜು ಸ್ಯಾಮ್ಸನ್‌ ಆರಂಭಿಕನಾಗಿ ಕಣಕ್ಕಿಳಿಯಲಿದ್ದು, ಗಿಲ್‌ ಬದಲಿಗೆ ಜಿತೇಶ್‌ ಶರ್ಮಾ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 26 ವರ್ಷ ವಯಸ್ಸಿನ ಗಿಲ್ 114 ಅಂತಾರಾಷ್ಟ್ರೀಯ ಪಂದ್ಯ 146 ಇನ್ನಿಂಗ್ಸ್‌ಗಳಲ್ಲಿ 46.30 ಸರಾಸರಿ ಮತ್ತು 80.05 ಸ್ಟ್ರೈಕ್ ರೇಟ್‌ನಲ್ಲಿ 6,020 ರನ್ ಗಳಿಸಿದ್ದಾರೆ. ಇದರಲ್ಲಿ 18 ಶತಕಗಳು ಮತ್ತು 25 ಅರ್ಧಶತಗಳೂ ಸೇರಿವೆ.

Leave a Reply

Your email address will not be published. Required fields are marked *

error: Content is protected !!