ಉದಯವಾಹಿನಿ, ಲಿವರ್‌ಪೊಲ್‌: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ(World Boxing Championships) ಭಾರತ ಮಹಿಳಾ ಬಾಕ್ಸರ್‌ಗಳಾದ ಜಾಸ್ಮಿನ್ ಲಂಬೋರಿಯಾ(Jaismine Lamboria), ವೀನಾಕ್ಷಿ ಹೂಡಾ, ನೂಪುರ್ ಶೆರಾನ್(Nupur) ಮತ್ತು ಪೂಜಾ ರಾಣಿ(Pooja) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ 2024ರ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ವಿರುದ್ಧ 4-1ರ ಅಂತರದಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈ ಗೆಲುವಿನೊಂದಿಗೆ, ಜಾಸ್ಮಿನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಒಂಬತ್ತನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು. ಜಾಸ್ಮಿನ್‌ಗೂ ಮುನ್ನ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ನಿಖತ್ ಜರೀನ್ (2022 ಮತ್ತು 2023), ಸರಿತಾ ದೇವಿ (2006), ಜೆನ್ನಿ (2006), ಲೀಖಾಸ್ (2006), ಲೊವ್ಲಿನಾ ಬೊರ್ಗೊಹೈನ್ (2023) ಮತ್ತು ಸವೀಟಿ ಬೂರಾ (2023).
ಮೀನಾಕ್ಷಿ ಹೂಡಾ (48 ಕೆಜಿ) 48 ಕೆಜಿ ಫೈನಲ್‌ನಲ್ಲಿ, ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ನಜಿಮ್ ಕೈಜೈಬೆ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಕಝಕ್‌ನ ಈ ಆಟಗಾರ್ತಿ ಈ ವರ್ಷದ ಆರಂಭದಲ್ಲಿ ಸೆರ್ಬಿಯಾದಲ್ಲಿ ನಡೆದ ಒಂದು ಚಿನ್ನದ ಪದಕ ಸೇರಿದಂತೆ ತಮ್ಮ ವೃತ್ತಿಜೀವನದಲ್ಲಿ ಮೂರು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಆದರೆ ಮೀನಾಕ್ಷಿ ಹೂಡಾ ವಿರುದ್ಧ ಅವರ ಆಟ ನಡೆಯಲಿಲ್ಲ.

Leave a Reply

Your email address will not be published. Required fields are marked *

error: Content is protected !!